ಮೊದಲ ಟಿ ಟ್ವೆಂಟಿ ಪಂದ್ಯ ನ್ಯೂಜಿಲ್ಯಾಂಡ್ ನೊಂದಿಗೆ ಭರ್ಜರಿ ಜಯ ಸಾಧಿಸಿದ ಬಾಂಗ್ಲಾ ದೇಶ

NZ Vs BAN, 3rd ODI Match Report: Bangladesh End New Zealand Drought With Sensational Napier Win

ಇಂದು ನಡೆದ ಬಾಂಗ್ಲಾದೇಶ ಹಾಗೂ  ನ್ಯೂಜಿಲ್ಯಾಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರು ಬಾಂಗ್ಲಾದೇಶ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದ ಬಾಂಗ್ಲಾದೇಶ ತಂಡ ಆರಂಭದಲ್ಲೇ ನ್ಯೂಜಿಲೆಂಡ್ ನ ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳ ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿದ್ದು, ನ್ಯೂಜಿಲೆಂಡ್ ನ ಆಲ್ ರೌಂಡರ್ ಜೇಮ್ಸ್ ನಿಶಾಮ್ 48ರನ್ ಬಾರಿಸುವ ಮೂಲಕ 134 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಲು ನೆರವಾದರು.

ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡ ಕೂಡ ಸಾಕಷ್ಟು ವಿಕೆಟ್ಗಳನ್ನು ಕಳೆದುಕೊಂಡಿದ್ದು, ಆರಂಭಿಕ ಬ್ಯಾಟ್ಸ್ಮನ್  ಲಿಟನ್ ದಾಸ್ 42 ರನ್ ಗಳಿಸುವ ಮೂಲಕ ಕೊನೆಯ ಹಂತದವರೆಗೂ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪಂದ್ಯದಲ್ಲಿ  ಬಾಂಗ್ಲಾದೇಶದ ಬೌಲರ್ಗಳಾದ ಶೋರಿಫುಲ್ ಇಸ್ಲಾಂ ಮೂರು ವಿಕೆಟ್ ಪಡೆದುಕೊಂಡರೆ ಮುಸ್ತಫಿಜುರ್ ರೆಹಮಾನ್  ಹಾಗೂ ಮಹೇದಿ ಹಸನ್ ತಲಾ ಎರಡು ವಿಕೆಟ್ ತೆಗೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read