Shocking: ಬಾಂಗ್ಲಾದಲ್ಲಿ ದುರ್ಗಾ ಮಾತೆ ಕುರಿತ ಅವಹೇಳನಾಕಾರಿ ಮೆಸೇಜ್ LED ಸ್ಕ್ರೀನ್‌ ಮೇಲೆ ಪ್ರದರ್ಶನ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ನಂತರ, ಹಿಂದೂಗಳು ಹೆಚ್ಚಿನ ಶೋಷಣೆಯನ್ನು ಎದುರಿಸುತ್ತಿದ್ದು,  ಅಲ್ಪಸಂಖ್ಯಾತರಾಗಿರುವ ಅವರಿಗೆ ಪದೇ ಪದೇ ಕಿರುಕುಳ ನೀಡಲಾಗುತ್ತಿದೆ.

ಈ ಪರಿಸ್ಥಿತಿಯ ನಡುವೆ, ದುರ್ಗಾ ಪೂಜೆಯ ಸಮಯದಲ್ಲಿ ಬಾಂಗ್ಲಾದೇಶದಿಂದ ಬಂದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಆಘಾತಕಾರಿಯಾಗಿದೆ. ದುರ್ಗಾ ದೇವಿಯ ಕುರಿತು ಆಕ್ಷೇಪಾರ್ಹ ಸಂದೇಶವನ್ನು ತೋರಿಸುತ್ತಿದ್ದು, ಏಷ್ಯಾನೆಟ್ ನ್ಯೂಸ್ ಬಾಂಗ್ಲಾ ಈ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸದಿದ್ದರೂ, ಅದನ್ನು ‘ಪಾಕಿಸ್ತಾನ್ ಅನ್‌ಟೋಲ್ಡ್’ ಹೆಸರಿನ ಎಕ್ಸ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ.

ಪಾಕಿಸ್ತಾನ್ ಅನ್‌ಟೋಲ್ಡ್ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, 10 ನಿಮಿಷಗಳ ವೀಡಿಯೊವು ಎಲ್‌ಇಡಿ ಬೋರ್ಡ್‌ನಲ್ಲಿ ಅತ್ಯಂತ ಅಗೌರವದ ಸಂದೇಶವನ್ನು ಪ್ರದರ್ಶಿಸಿದೆ.

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ಆಚರಣೆಗೆ ಅಡ್ಡಿ ಸೇರಿದಂತೆ ಹಲವಾರು ಘಟನೆಗಳು ಸಂಭವಿಸಿವೆ. ಈಗ ಹರಿದಾಡುತ್ತಿರುವ ವಿಡಿಯೋ ನಿಜವಾಗಿದ್ದರೆ, ಇದು ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read