ಮುಂಬೈ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದಲ್ಲಿ ಬಂಧಿಸಲಾಗಿದ್ದ ಬಾಂಗ್ಲಾದೇಶದ ಮಹಿಳೆ ಆಸ್ಪತ್ರೆಯಲ್ಲಿ ತಪ್ಪಿಸಿಕೊಂಡ್ ಪರಾರುಯಾಗಿರುವ ಘಟನೆ ನಡೆದಿದೆ.
ಬಾಂಗ್ಲಾದೇಶದ ರುಬಿನಾ ಇರ್ಷದ್ ಶೇಖ್ (21) ಎಂಬಾಕೆಯನ್ನು ವೈದ್ಯಕೀಯ ತಪಾಸಣೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ಕರೆತಂದಾಗಿ ಆಕೆ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ. ಐದು ತಿಂಗಳ ಗರ್ಭಿಣಿಯಾಗಿರುವ ರುಬಿನಾ ಆಸ್ಪತ್ರೆಯಲ್ಲಿ ಕಾನ್ಸ್ ಟೇಬಲ್ ಅವರನ್ನು ತಳ್ಳಿ ಎಸ್ಕೇಪ್ ಆಗಿದ್ದಾಳೆ.
ನವಿ ಮುಂಬೈನಲ್ಲಿ ಆಗಸ್ಟ್ 5ರಂದು ರುಬಿನಾಳನ್ನು ಬಂಧಿಸಲಾಗಿತ್ತು. ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಜ್ವರ, ಚರ್ಮದ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದ ರುಬಿನಾಳನ್ನು ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಕೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದಾಳೆ. ಪರಾರಿಯಾಗಿರುವ ಮಹಿಳೆಯ ಪತ್ತೆಗಾಗಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.