ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿರುವ ಜಾಮೆಟ್ರಿ ಪಬ್ ನಲ್ಲಿ ಕಳ್ಳತನ ನಡೆದಿದೆ. ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಕಳ್ಳ ಪರಾಯಾಗಿದ್ದಾನೆ.
ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದಲು ಅಡಾವತ್ ತಿಳಿಸಿದ್ದಾರೆ. ಪಬ್ ಸಿಬ್ಬಂದಿ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳ್ಳ ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಎಸ್ಕೇಪ್ ಆಗಿದ್ದಾನೆ ಎಂದರು.
ಬ್ಯಾಕ್ ಗೇಟ್ ನಿಂದ ಕಳ್ಳ ಪಬ್ ಗೆ ಎಂಟ್ರಿ ಕೊಟ್ಟಿದ್ದಾನೆ. ಎಲ್ಲಾ ಸಿಸಿಟಿವಿ, ಲೈಟ್ ಗಳನ್ನು ಆಫ್ ಮಾಡಿ ಕಳ್ಳತನ ಮಾಡಿದ್ದಾನೆ. ಪೊಲೀಸರು ಜಾಮೆಟ್ರಿ ಪಬ್ ನಲ್ಲಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.