ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ನೈಜೇರಿಯಾ ಮೂಲದ ಡ್ರಗ್ ಪೆಡ್ಲರ್ ಗಳನ್ನು ಎಲೆಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಒಕೆ ಚೆನ್ಯಾಡು ಸ್ಯಾಮ್ಯುಯಲ್ ಹಾಗೂ ಕ್ಯುಕುರಿಜಾ ಟೋಪಿಸಾ ಬಂಧಿತ ಆರೋಪಿಗಳು. ಬಂಧಿತರಿಂದ 2.15 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 43 ಗ್ರಾಂ ಕೊಕೇನ್, 490 ಗ್ರಾಂ ಎಂಡಿಎಂಎ, ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು 2011ಕ್ಕೂ ಮೊದಲೇ ನೈಜೀರಿಯಾದಿಂದ ಬೆಂಗಳೂರುಗೆ ಬಂದು ನೆಲೆಸಿದ್ದರು. ನಕಲಿ ಪಾಸ್ ಪೋರ್ಟ್, ವೀಸಾ ಬಳಸಿ ಬೆಂಗಳೂರಿಗೆ ಬಂದಿದ್ದರು. ಐಟಿ ಉದ್ಯೋಗಿಗಳನ್ನು ಹಾಗೂ ಸ್ಥಳೀಯರನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಪೂರೈಸುತ್ತಿದ್ದರು.