ಬೆಂಗಳೂರು : ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್ ಹಾಗೂ ಪುನರ್ವಸತಿ ಕೇಂದ್ರಗಳಿಗೆ ದಂಡ ವಿಧಿಸಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್.ಜಿ ಅವರು ಆದೇಶಿಸಿದ್ದಾರೆ.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕೆಪಿಎಂಇ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಒಟ್ಟು 58 ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್ ಗಳು ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಕೆಪಿಎಂಇ ಕಾಯ್ದೆ ಅನ್ವಯ ನಿಯಮವನ್ನು ಉಲ್ಲಂಘನೆ ಮಾಡಿರುವ ಅಂದ್ರಹಳ್ಳಿಯಲ್ಲಿರುವ ತಿಗಳರಪಾಳ್ಯದ ಮಾರುತಿ ಕ್ಲಿನಿಕ್, ತಿಗಳರ ಪಾಳ್ಯದ ಶಾರದಾ ಕ್ಲಿನಿಕ್ (ಮೌಲ್ಯ ಕ್ಲಿನಿಕ್), ಮಾರತಿ ನಗರದ ಹುಸೈನ್ ಪಾಲಿ ಕ್ಲಿನಿಕ್, ಕಲ್ಯಾಣ ನಗರದ ಟ್ರೈ ಲೈಫ್ ಹಾಸ್ಪಿಟಲ್, ವಿಜಯನಗರದ ಸುರಕ್ಷಾ ಹಾಸ್ಪಿಟಲ್, ಪೀಣ್ಯದ ರೈಟ್ ಟೈಮ್ ಫೌಂಡೇಶನ್, ಕೆಂಗೇರಿಯ ಸಹನ್ ಫೌಂಡೇಶನ್ (ಸ್ಮೈಲ್ ಫೌಂಡೇಶನ್) ಪುನರ್ವಸತಿ ಕೇಂದ್ರ, ಚಿಕ್ಕಬಾಣಾವರದ ಶ್ರೀನಿವಾಸ್ ಆಸ್ಪತ್ರೆ, ಕಾಮಾಕ್ಷಿಪಾಳ್ಯದ ಸಂಜೀವಿನಿ ಹೆಲ್ತ್ ಸೆಂಟರ್, ಗೋವಿಂದಶೆಟ್ಟಿ ಪಾಳ್ಯದ ಇನ್ಪಿನಿಟಿ ಕ್ಲಿನಿಕ್, ಎಲೆಕ್ಟ್ರಾನಿಕ್ ಸಿಟಿಯಲ್ಲಿರು ಮುನಿಸ್ವಾಮಿ ಲೇಔಟ್ ಬಾಲಾಜಿ ಕ್ಲಿನಿಕ್,ಕನಕಪುರ ರಸ್ತೆಯಲ್ಲಿರುವ ಗಗನ್ ಡೆಂಟಲ್ ಕೇರ್ ಕ್ಲಿನಿಕ್, ನಾಗಶೆಟ್ಟಿಹಳ್ಳಿಯ ಸ್ನೇಹ ಕ್ಲಿನಿಕ್, ಫಸ್ಟ್ ಕೇರ್ ಸೂಪರ್ ಸ್ಪೆಷಾಲಿಟಿ ಹೇಲ್ತ್ ಕೇರ್ ಆಂಡ್ ಡಯಾಗ್ನೋಸಿಸ್ ಸೆಂಟರ್ ಗಳಿಗೆ ಒಟ್ಟು 6,15,000/- ರೂ ಗಳ ದಂಡ ವಿಧಿಸಿದರು.
ವಿದ್ಯಾರಣ್ಯಪುರದ ಸನ್ ರೈಸ್ ಮೆಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಮಲಾನಗರದ ಸರ್ವಶಕ್ತಿ ಸಮಾಲೋಚನಾ ಕೇಂದ್ರ, ಬನ್ನೇರುಘಟ್ಟ ರಸ್ತೆಯಲ್ಲಿರುವ ಮಾ ಕ್ಲಿನಿಕ್, ಶೇಷಾದ್ರೀಪುರದ ಶ್ರೀಶಕ್ತಿ ಆರೋಗ್ಯ ಕೇಂದ್ರ, ದೊಡ್ಡಕನ್ನಳ್ಳಿಯ ಹೆಲ್ಲೈನ್ ಪಾಲಿ ಕ್ಲಿನಿಕ್ ಕೇಂದ್ರಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮೂರು ಪ್ರಕರಣಗಳನ್ನು ಮುಕ್ತಾಗೊಳಿಸಿ, ಉಳಿದ ಬಾಕಿ ಇರುವ ಪ್ರಕರಣಗಳನ್ನು ಮುಂದಿನ ಸಭೆಯಲ್ಲಿ ಮಂಡಿಸುವಂತೆ ಅವರು ತಿಳಿಸಿದರು.
ಈ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವೀಂದ್ರನಾಥ ಎಂ. ಮೇಟಿ, ಆಕಾಶ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಮಕ್ಕಳ ತಜ್ಞರಾದ ಡಾ|| ಶ್ರೀನಿವಾಸ,ಕೆ.ಸಿ ಜನರಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಶೀಲಾ ಮಾನೆ, ಮೆಡಿಕಲ್ ಜೆನೆಟಿಸ್ಟ್ ಡಾ|| ಚೇತನ್, ಕೆ.ಎ.ಎಸ್.ಪಿ.ಎ.ಎಸ್ ವಕೀಲರಾದ ಸುಮನ ಬಲಿಗಾ, ವಿಝನ್ ಬೆಂಗಳೂರು ಟ್ರಸ್ಟ್,ಎನ್.ಜಿ.ಓ,ದ ವಸಂತ ಕುಮಾರ್, ಸುಮಂಗಲಿ ಸೇವಾಶ್ರಮ ಎನ್.ಜಿ.ಓ, ದ ಸುಶೀಲಮ್ಮ, ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ರೇಡಿಯಾಲಜಿಸ್ಟ್ ಡಾ|| ಲೀಲಾ, ಆರ್.ಪಿ, ಬೆಂಗಳೂರು ನಗರ ಜಿಲ್ಲೆಯ ಐ.ಆರ್.ಐ.ಎ ಡಾ|| ವಿಜಯ ಸಾರಥಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ಶಿಲ್ಪ.ಜಿ.ಬಿ ಮತ್ತು ಪರಸ್ಪರ ಎನ್.ಜಿ.ಓ ದ ಭಾಗ್ಯಲಕ್ಷ್ಮಿ ರವರು ಉಪಸ್ಥಿತರಿದ್ದರು.