BIG NEWS: ಬೆಂಗಳೂರಿಗರೇ ಎಚ್ಚರ…..! ಸಿಲಿಕಾನ್ ಸಿಟಿ ಜನರಲ್ಲಿ ಹೆಚ್ಚುತ್ತಿದೆ ಏರ್ ಪೊಲ್ಯೂಷನ್ ಡಿಸಾರ್ಡರ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸೌಲಭ್ಯ, ವ್ಯವಸ್ಥೆಗಳು ಬಂದಿದ್ದರೂ ಕೂಡ ಸಿಲಿಕಾನ್ ಸಿಟಿಯಲ್ಲಿ ಮಾಲಿನ್ಯ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಗಾಳಿಯ ಗುಣಮಟ್ಟ ಕಡಿಮೆಯಾಗುತ್ತಿದ್ದು, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳದಿಂದಾಗಿ ಜನರಲ್ಲಿ ಏರ್ ಪೊಲ್ಯೂಷನ್ ಡಿಸಾರ್ಡರ್ ನಂತಹ ಸಮಸ್ಯೆಯುಂಟಾಗುತ್ತಿದೆ. ಇದರಿಂದಾಗಿ ಜನರು ಪ್ರಾಣಕಳೆದುಕೊಳ್ಳುತ್ತಿರುವ ಪ್ರಕರಣವೂ ಹೆಚ್ಚಾಗಿದೆ. ಏರ್ ಪೊಲ್ಯೂಷನ್ ಡಿಸಾರ್ಡರ್ ಜನರ ಜೀವಕ್ಕೆ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಎದೆ ರೋಗಿಗಳ ಸಂಸ್ಥೆ ಅಧ್ಯಯನ ನಡೆಸಲು ಮುಂದಾಗಿದೆ.

ಒಂದೆಡೆ ಕಲುಷಿತ ಹವಾಮಾನ, ಧೂಮಪಾನ, ಮದ್ಯಪಾನ ಇದರಿಂದಾಗಿ ಬೆಂಗಳೂರಿನಲ್ಲಿ ಲಂಗ್ಸ್ ಡ್ಯಾಮೇಜ್ ನಂತಹ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಏರುತ್ತಿದೆ. ಇನ್ನೊಂದೆಡೆ ಟ್ರಾಫಿಕ್ ನಡುವೆ ಕಾರ್ಯನಿರ್ವಹಿಸುವ ಪೊಲೀಸರು, ಕೆ ಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು, ವಾಹನ ಸವಾರರು ಏರ್ ಪೊಲ್ಯೂಷನ್ ಡಿಸಾರ್ಡರ್ ನಿಂದ ಬಳಲುತ್ತಿದ್ದಾರೆ.

ಏರ್ ಪೊಲ್ಯೂಷನ್ ಡಿಸಾರ್ಡರ್ ನಿಂದಾಗಿ ಲಂಗ್ಸ್ ಡ್ಯಾಮೇಜ್, ಕ್ಯಾನ್ಸರ್, ಬ್ರಾಂಕಟಿಸ್, ಹೃದಯಾಘಾತದಂತಹ ಪ್ರಕರಣ ಹೆಚ್ಚಳಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಎದೆ ರೋಗಿಗಳ ಸಂಸ್ಥೆ ಮೊದಲು ಟ್ರಾಫಿಕ್ ಪೊಲೀಸರು, ಬಸ್ ಚಾಲಕರು, ನಿರ್ವಾಹಕರ ಮೇಲೆ ಅದ್ಯಯನ ನಡೆಸಲು ತೀರ್ಮಾನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read