ಬಳ್ಳಾರಿ: ರಾತ್ರಿ ಮಲಗಿದ್ದಲ್ಲಿಯೇ ಬಾಲಕಿಗೆ ಹಾವು ಕಚ್ಚಿದ್ದು, ನಿದ್ರೆಯಲ್ಲಿಯೇ ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಹೊಸ ಮೋಕಾದಲ್ಲಿ ನಡೆದಿದೆ.
13 ವರ್ಷದ ಶ್ರಾವಣಿ ಮೃತ ವಿದ್ಯಾರ್ಥಿನಿ. ಬೆಳಿಗ್ಗೆ ಬಾಲಕಿ ಏಳದಿದ್ದಾಗ ಕುಟುಂಬದವರು ಗಮನಿಸಿದಾಗ ಬಾಲಕಿಗೆ ಮೂರು ಕಡೆಗಳಲ್ಲಿ ನಾಗರಹಾವು ಕಚ್ಚಿರುವುದು ಕಂಡುಬಂದಿದೆ. ರಾತ್ರಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ.
ಬಾಲಕಿಯ ಕೈ, ಕಾಲುಗಳಿಗೆ ಮೂರು ಕಡೆ ಹಾವು ಕಡಿದಿದ್ದು, ವಿಷವೇರಿ ಬಾಲಕಿ ಮಲಗಿದ್ದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.