ಬಳ್ಳಾರಿ ಬಿಜೆಪಿ ಸಂಸದ ಪುತ್ರನ ವಿರುದ್ಧ `ಲವ್, ಸೆಕ್ಸ್ ದೋಖಾ’ ಆರೋಪ : ಮಹಿಳಾ ಪೊಲೀಸ್ ಠಾಣೆಯಲ್ಲಿ `FIR’ ದಾಖಲು

ಬೆಂಗಳೂರು :  ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.

ಬೆಂಗಳೂರಿನ  ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.  2022 ರಲ್ಲಿ ಯುವತಿಯ ಪರಿಚಯ ಮಾಡಿಕೊಂಡು ಬಳಿಕ ಪ್ರೀತಿ, ಪ್ರೇಮದ ನಾಟಕವಾಡಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿದ್ದಾರೆ ಎಂದು ಬೆಂಗಳೂರು ಮೂಲದ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿನಲ್ಲಿ ಏನಿದೆ?

2022ರಲ್ಲಿ  ರಂಗನಾಥ್ ವೈ.ಡಿ ಎಂಬುವವರು ನನ್ನ ಸ್ನೇಹಿತರ ಮೂಲಕ ಪರಿಚಯವಾಗಿದ್ದು, ಆಗಾಗ ನನಗೆ ಫೋನ್ ಮಾಡಿ ಮಾತನಾಡುತ್ತಿದ್ದರು, ಸ್ವಲ್ಪ ದಿನಗಳ ನಂತರ ರಂಗನಾಥರವರು ನನಗೆ ಕರೆ ಮಾಡಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಾನು ಮೈಸೂರಿನ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿಕೆಲಸ ಮಾಡುತ್ತಿದ್ದು, ಕೈ ತುಂಬ ಸಂಬಳ ಬರುತ್ತದೆ, ನೀನು ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ನಂಬಿಸಿರುತ್ತಾನೆ.

ನಂತರ ರಂಗನಾಥ್‌ರವರು 2023ಜನವರಿ 23ರಂದು ನನಗೆ ಬೆಂಗಳೂರಿನಲ್ಲಿ ಕೆಲಸವಿದೆ ನಾನು ಬರುತ್ತಿದ್ದೇನೆ ಎಂದು ಹೇಳಿ 2023ರ ಜನವರಿ  24ರಂದು ಬೆಂಗಳೂರಿನ ಕೊಡಿಗೆ ಹಳ್ಳಿಯ ಸ್ವಾತಿ ಹೋಟೆಲ್‌ಗೆ ಬಂದು ನನ್ನನ್ನು ಹೋಟೆಲ್‌ಗೆ ಕರೆಸಿಕೊಂಡು, ನಂತರ ಅಲ್ಲಿಂದ ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗಿ, ಅಲ್ಲಿ ಲಲಿತ್ ಮಹಲ್ ಪ್ಯಾಲೇಸ್ ಎಂಬ ಹೋಟೆಲ್‌ಗೆ ಕರೆದುಕೊಂಡು ಹೋಗಿ, ಈಗ  ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಆಗುವುದಿಲ. ಇವತ್ತು ಇಲ್ಲಿಯೇ ಇದ್ದು ಬೆಳ್ಳಗೆ ನಮ್ಮ ಮನೆಗೆ ಹೋಗೋಣ ಎಂದು ಹೇಳಿ, ರಾತ್ರಿ ನಾನು ರಂಗನಾಥ್ ರವರೊಂದಿಗೆ ಇರುವಾಗ ರಂಗನಾಥ್ ಮದ್ಯ ಸೇವನೆ ಮಾಡಿ, ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ, ನಂಬಿಸಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ತಾನೆ. ಮರುದಿನ ನನ್ನನ್ನು ಬೆಂಗಳೂರಿಗೆ ಕಳಿಸಿಕೊಟ್ಟಿರುತ್ತಾನೆ…

ಆದರೆ  ಇತ್ತೀಚೆಗೆ ರಂಗನಾಥ್ ಮೊದಲಿನ ಹಾಗೇ ನನ್ನನ್ನೊಂದಿಗೆ ಮಾತನಾಡದೇ, ನಿರ್ಲಕ್ಷ್ಯ ಮಾಡಿ ಈಗ ಮದುವೆ ಮಾಡಿಕೊಳ್ಳದೇ, ಮೋಸ ಮಾಡಿರುತ್ತಾನೆ. ನಾನು ರಂಗನಾಥ್‌ರವರನ್ನು ಮದುವೆಯಾಗು ಎಂದು ಕೇಳಿದರೆ ಕೊಲೆ ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ರಂಗನಾಥ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read