‘ಪಠಾಣ್’ ವಿರುದ್ಧ ಭಜರಂಗದಳದ ಕಾರ್ಯಕರ್ತರ ಪ್ರತಿಭಟನೆ ವೇಳೆ ಮಾಲ್ ಧ್ವಂಸ

ಖ್ಯಾತ ನಟ ಶಾರುಖ್ ಖಾನ್ ಅಭಿನಯರದ ‘ಪಠಾನ್’ ಪ್ರಚಾರದ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್‌ನಲ್ಲಿ ಮಾಲ್ ಅನ್ನು ಧ್ವಂಸಗೊಳಿಸಿದೆ.

ವಿಹೆಚ್‌ಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದು ಮತ್ತು ಪೋಸ್ಟರ್‌ ಗಳನ್ನು ಹರಿದು ಹಾಕುವುದ ನೋಡಬಹುದು.

ಗುಜರಾತ್ ವಿಹೆಚ್‌ಪಿ ಈ ಹಿಂದೆ ಗುಜರಾತ್‌ನಲ್ಲಿ ಎಲ್ಲಿಯೂ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು, ‘ಬೇಷರಂ ರಂಗ್’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಅವರೊಂದಿಗೆ ನೃತ್ಯ ಮಾಡುವಾಗ ಕೇಸರಿ ಉಡುಗೆ ಧರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಗುಜರಾತ್‌ನಲ್ಲಿ ಪಠಾಣ್ ಚಿತ್ರ ಪ್ರದರ್ಶನಕ್ಕೆ ನಾವು ಅವಕಾಶ ನೀಡುವುದಿಲ್ಲ. ಅಹಮದಾಬಾದ್‌ನಲ್ಲಿ ಚಿತ್ರದ ಬಿಡುಗಡೆ ವಿರುದ್ಧ ಇಂದಿನ ಪ್ರತಿಭಟನೆಯನ್ನು ರಾಜ್ಯಾದ್ಯಂತ ಎಲ್ಲಾ ಥಿಯೇಟರ್ ಮಾಲೀಕರು ಎಚ್ಚರಿಕೆಯಾಗಿ ತೆಗೆದುಕೊಳ್ಳಬೇಕು. ಅವರು ತಮ್ಮ ಥಿಯೇಟರ್‌ಗಳು ಅಥವಾ ಮಲ್ಟಿಪ್ಲೆಕ್ಸ್‌ ಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವುದರಿಂದ ದೂರವಿರಬೇಕು ಎಂದು ಗುಜರಾತ್ ವಿಹೆಚ್‌ಪಿ ವಕ್ತಾರ ಹಿತೇಂದ್ರಸಿಂಹ ರಜಪೂತ್ ಹೇಳಿದ್ದಾರೆ.

https://twitter.com/ANI/status/1610806518366208000

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read