ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ‘ಬಜ್ರಾ ರಾಬ್’

ಎಲ್ಲರೂ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನಕೊಡುತ್ತಿದ್ದಾರೆ. ಇದೀಗ ನಾವು ಹೇಳಿಕೊಡಲಿರುವ ಈ ಪಾಕವಿಧಾನವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಾಲಿಗೆಗೂ ರುಚಿ ಕೊಡುತ್ತದೆ. ಬಜ್ರಾ ರಾಬ್ ರೆಸಿಪಿ ಮಾಡುವ ಬಗೆ ಹೇಗೆ ಎಂಬುದು ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು: ಸಜ್ಜೆ ಹಿಟ್ಟು- 1/2 ಕಪ್, ನೀರು- 4 ಕಪ್, ತುಪ್ಪ- 1 ಟೀಸ್ಪೂನ್, ಬೆಲ್ಲದ ಪುಡಿ- 1/4 ಕಪ್, ತುರಿದ ಶುಂಠಿ, ಅಜ್ವೈನ್- 1/2 ಟೀಸ್ಪೂನ್

ಮಾಡುವ ವಿಧಾನ:

ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಬಿಸಿಯಾಗಲು ಬಿಡಿ. ತುರಿದ ಶುಂಠಿ, ಅಜ್ವೈನ್ ಮತ್ತು ಸಜ್ಜೆ ಹಿಟ್ಟು ಸೇರಿಸಿ. ಮಿಶ್ರಣವು ಉತ್ತಮ ಕಂದು ಬಣ್ಣಕ್ಕೆ ತಿರುಗುವವರೆಗೆ ಬೆರೆಸಿ. ಬಳಿಕ ನೀರು ಮತ್ತು ಬೆಲ್ಲದ ಪುಡಿ ಸೇರಿಸಿ. ಮಿಶ್ರಣವನ್ನು 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿದರೆ ಸಿದ್ದವಾಗುತ್ತೆ ಬಜ್ರಾ ರಾಬ್, ಇದನ್ನು ಬಿಸಿ ಬಿಸಿ ಇರುವಾಗಲೇ ಸವಿಯಿರಿ.

ಪ್ರಯೋಜನಗಳು:

ಸಜ್ಜೆಯು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶಗಳಿಂದ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಜ್ವೈನ್ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಹಾಗೂ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ವಿರುದ್ಧ ಹೋರಾಡುತ್ತದೆ. ಬೆಲ್ಲವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read