ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ರಾಜ್ಯಾದ್ಯಂತ ವಸತಿ ಬಡಾವಣೆ, ಕೈಗೆಟುಕುವ ದರದಲ್ಲಿ ಸೈಟ್

ಬೆಂಗಳೂರು: ರಾಜ್ಯಾದ್ಯಂತ ವಸತಿ ಬಡಾವಣೆಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಅಗತ್ಯಕ್ರಮಕ್ಕೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಿಗಳು ಕನಿಷ್ಠ 100 ಎಕರೆ ಜಮೀನು ಖರೀದಿಸಿ ಅದನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಬೇಕೆಂದು ಹೇಳಿದ್ದಾರೆ.

ಖಾಸಗಿ ಬಡಾವಣೆಗಳ ನಿರ್ಮಾಣ ಮಾಡುವವರಿಗೆ ನಕ್ಷೆ ಮತ್ತು ಲೇಔಟ್ ಅನುಮೋದನೆ ನೀಡುವ ಬದಲು ಆಯಾ ಪ್ರಾಧಿಕಾರಗಳ ವತಿಯಿಂದ ಜಮೀನು ಗುರುತಿಸಿ ಖರೀದಿಸಿ ಅಭಿವೃದ್ಧಿಪಡಿಸಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ನಿವೇಶನ ನೀಡಲು ಮುಂದಾಗಬೇಕೆಂದು ತಿಳಿಸಿದ್ದಾರೆ.

ಸಾಧ್ಯವಾದಷ್ಟು ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು. ಕೃಷಿಯೇತರ ಜಮೀನುಗಳನ್ನು ಗುರುತಿಸಿ ಸಂಬಂಧಿಸಿದ ರೈತರೊಂದಿಗೆ ಮಾತನಾಡಿ 50:50 ಅನುಪಾತದಲ್ಲಾದರೂ ನಿವೇಶನ ಹಂಚಿಕೆ ಮಾಡಬೇಕು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read