ಬಡವರು, ಸಣ್ಣ, ಅತಿ ಸಣ್ಣ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು: ಬಜೆಟ್ ನಲ್ಲಿ ಘೋಷಣೆ ಮಾಡಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಂಗಳೂರು: ಬಡವರು, ಸಣ್ಣ, ಅತಿ ಸಣ್ಣ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಮಲೆನಾಡು ಪ್ರದೇಶದಲ್ಲಿ ಕಾನು, ಬಾಣೆ, ಸೊಪ್ಪಿನ ಬೆಟ್ಟ, ಹುಲ್ಲುಬನಿ ಹಾಗೂ ಸರ್ಕಾರಿ ಬೀಳು, ಒಳಗೊಂಡಂತೆ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಸಾವಿರಾರು ಬಡವರು, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ  ಬಗರ್ ಹುಕುಂ  ಜಮೀನನ್ನು ಮಂಜೂರು ಮಾಡಲು ನಾಳಿನ ಬಜೆಟ್ ನಲ್ಲಿ ಘೋಷಿಸಬೇಕೆಂದು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ವಿನಂತಿಸಿದ್ದಾರೆ.

ಸಚಿವರು ಇಂದು  ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಹುದಿನಗಳ ಈ ಬೇಡಿಕೆಯನ್ನು ಮನ್ನಿಸಿ ಸಾವಿರಾರು ಬಡ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಗ್ಗೆ ಹೊಂದಿರುವ ಕನಸನ್ನು ನನಸು ಮಾಡಲು ಮನವಿ ಮಾಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read