ಬಾಗಲಕೋಟೆಯಲ್ಲಿಂದು ಸಂಯುಕ್ತಾ ಪಾಟೀಲ್ ಪರ ಸಿಎಂ ಸಿದ್ಧರಾಮಯ್ಯ ಭರ್ಜರಿ ಪ್ರಚಾರ

ಬಾಗಲಕೋಟೆ: ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ರಬಕವಿ -ಬನಹಟ್ಟಿಯ ಎಸ್.ಆರ್.ಎ. ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಬೆಳಗ್ಗೆ 10:15ಕ್ಕೆ ಕಲಬುರ್ಗಿಯಿಂದ ತೆರಳಲಿರುವ ಸಿಎಂ 11:45 ಕ್ಕೆ ರಬಕವಿ -ಬನಹಟ್ಟಿಗೆ ಆಗಮಿಸಲಿದ್ದಾರೆ. ಪ್ರಜಾಧ್ವನಿ 2 ಲೋಕಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read