ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌; ಫೋನ್ ತಯಾರಿಕಾ ಉದ್ಯಮವೊಂದರಲ್ಲೇ ಸೃಷ್ಟಿಯಾಗಲಿದೆ 1,50,000 ಹುದ್ದೆ

ಭಾರತಕ್ಕೆ ಹೆಚ್ಚಿನ ಟೆಕ್ ಮತ್ತು ಉತ್ಪಾದನಾ ಕಂಪನಿಗಳ ಆಗಮನಕ್ಕೆ ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಈ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ 1,50,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಉನ್ನತ ಹ್ಯಾಂಡ್‌ಸೆಟ್ ತಯಾರಕರು ಭಾರತದಲ್ಲಿ ದೊಡ್ಡ ಪ್ರಮಾಣದ ನೇಮಕಾತಿಯನ್ನು ಯೋಜಿಸುತ್ತಿದ್ದಾರೆ. ಭಾರತ ಸರ್ಕಾರದ ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯಿಂದ ಇದು ಸಹಕಾರಿಯಾಗಿದೆ ಎಂದು ತಿಳಿದು ಬಂದಿದೆ. ಹಲವಾರು ಕಂಪನಿಗಳು ಈ ವಲಯದಲ್ಲಿ ಅಂದಾಜು 120,000–150,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮುಂದಾಗುತ್ತಿದೆ.

ಸ್ಯಾಮ್‌ಸಂಗ್, ನೋಕಿಯಾಮ್ ಫಾಕ್ಸ್‌ಕಾನ್, ವಿಸ್ಟ್ರಾನ್, ಪೆಗಾಟ್ರಾನ್, ಟಾಟಾ ಗ್ರೂಪ್ ಮತ್ತು ಸಾಲ್‌ಕಾಂಪ್‌ನಂತಹ ದೊಡ್ಡ ಕಾರ್ಪೊರೇಟ್ ದೈತ್ಯರು ದೇಶದಲ್ಲಿ ತಮ್ಮ ಉದ್ಯೋಗಿಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಭಾರತದಲ್ಲಿ ಮೊಬೈಲ್ ತಯಾರಕರು ಬೇಡಿಕೆಯ ಹೆಚ್ಚಳದ ನಿರೀಕ್ಷೆಯಲ್ಲಿ ನೇಮಕಾತಿಯನ್ನು ಪುನರಾರಂಭಿಸಿದ್ದಾರೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ಕಂಡುಬರುವ ಸರಾಸರಿ ಬೇಡಿಕೆಗಿಂತ ತಂತ್ರಜ್ಞರು, ಮೇಲ್ವಿಚಾರಕರು ಮತ್ತು ಗುಣಮಟ್ಟದ ಭರವಸೆ ಪ್ರೊಫೈಲ್‌ಗಳ ಬೇಡಿಕೆಯು ದ್ವಿಗುಣವಾಗಿದೆ ಎಂದು ಸಿಯೆಲ್ ಎಚ್‌ಆರ್ ಸರ್ವಿಸಸ್ ಸಿಇಒ ಆದಿತ್ಯ ನಾರಾಯಣ ಮಿಶ್ರಾ ಹೇಳಿದ್ರು.

ಹೆಚ್ಚಿನ ಮೊಬೈಲ್ ಬ್ರಾಂಡ್‌ಗಳು ಮತ್ತು ಅವುಗಳ ಘಟಕಗಳ ತಯಾರಿಕೆ ಮತ್ತು ಅಸೆಂಬ್ಲಿ ಪಾಲುದಾರರು ಈಗಾಗಲೇ ಭಾರತದಲ್ಲಿ ಉತ್ಪಾದನೆಯನ್ನು ಹೊಂದಲು ಬಯಸುತ್ತಿರುವವರು ನೇಮಕಾತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಟೀಮ್‌ಲೀಸ್ ಸರ್ವಿಸಸ್‌ನ ಸಿಇಒ ಕಾರ್ತಿಕ್ ನಾರಾಯಣ್ ಹೇಳಿದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read