ಸೊಂಟ ನೋವಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ ಮಾಡುವವರಿಗೆ ಹಾಗೂ ಬೈಕ್ ನಲ್ಲಿ ದಿನದ 8-9 ಗಂಟೆ ಸುತ್ತಾಡುವ ನೌಕರರಿಗೆ ಸೊಂಟ ನೋವು ಖಾಯಂ ಆಗಿದೆ. ಈ ಸೊಂಟ ನೋವಿಗೆ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು.

ತೆಂಗಿನ ಎಣ್ಣೆ ಸೊಂಟ ನೋವು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ತೆಂಗಿನ ಎಣ್ಣೆಗೆ ಸಿಪ್ಪೆ ತೆಗೆದ ಬೆಳ್ಳುಳ್ಳಿಯನ್ನು ಹಾಕಿ. ಆ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಮಸಾಜ್ ಮಾಡುತ್ತ ಬಂದ್ರೆ ಸೊಂಟ ನೋವು ಕಡಿಮೆಯಾಗುತ್ತದೆ.

ರಾಕ್ ಸಾಲ್ಟ್ ಕೂಡ ಸೊಂಟ ನೋವು ಕಡಿಮೆ ಮಾಡುತ್ತದೆ. ಸ್ನಾನ ಮಾಡುವ ನೀರಿಗೆ ರಾಕ್ ಸಾಲ್ಟ್ ಹಾಕಿ ಸ್ನಾನ ಮಾಡಿ. ಇದು ಸೊಂಟ ನೋವನ್ನು ಕಡಿಮೆ ಮಾಡುತ್ತದೆ.

ಬಿಸಿ ಮಾಡಿದ ಸಾಸಿವೆ ಎಣ್ಣೆಗೆ ಸುಟ್ಟ ಬೆಳ್ಳುಳ್ಳಿಯನ್ನು ಬೆರೆಸಿ ಆ ಎಣ್ಣೆಯನ್ನು ಹಚ್ಚಿಕೊಂಡ್ರೆ ನೋವು ಕಡಿಮೆಯಾಗಿ ಹಿತವೆನಿಸುತ್ತದೆ.

-ಕರಿಮೆಣಸನ್ನು ಪುಡಿ ಮಾಡಿ ಪ್ರತಿ ದಿನ ಟೀಗೆ ಹಾಕಿ ಕುಡಿಯುವುದ್ರಿಂದ ಸೊಂಟ ನೋವು ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read