ಹೃದಯ ವಿದ್ರಾವಕ ಘಟನೆ: ಕಸದ ರಾಶಿಗೆ ಎಸೆದ ಶಿಶು ಮೇಲೆ ವಾಹನಗಳು ಹರಿದು ಸಾವು

ಬೆಂಗಳೂರು: ಕಸದ ರಾಶಿಗೆ ಎಸೆಯಲಾಗಿದ್ದ ಹಸುಗೂಸಿನ ಮೇಲೆ ವಾಹನಗಳು ಹರಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಪಂಪಾ ಲೇಔಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಗು ಜನಿಸಿರುವುದನ್ನು ರಹಸ್ಯವಾಗಿಡುವ ಉದ್ದೇಶದಿಂದ ನಾಲ್ಕೈದು ತಿಂಗಳ ಶಿಶುವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಕಸದ ತೊಟ್ಟಿಗೆ ಎಸೆಯಲಾಗಿದೆ. ಕಸ ತುಂಬುವವರು ಗಮನಿಸದೇ ಅದನ್ನು ತುಂಬಿಕೊಂಡಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಿಬಿಎಂಪಿ ಕಸದ ಲಾರಿಯಿಂದ ಶಿಶು ಇದ್ದ ಪ್ಲಾಸ್ಟಿಕ್ ಕವರ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸದ ಹಿಂದಿನಿಂದ ಬಂದ ವಾಹನಗಳು ಕವರ್ ಮೇಲೆಯೇ ಹರಿದು ಶಿಶು ಸ್ಥಳದಲ್ಲೇ ಸಾವನ್ನಪ್ಪಿದೆ.

ಕವರ್ ನೊಳಗೆ ಮಗು ಇರುವುದನ್ನು ಗಮನಿಸದೇ ವಾಹನಗಳು ಸಂಚರಿಸಿದ ಪರಿಣಾಮ ಶಿಶುವಿನ ದೇಹ ನುಜ್ಜುಗುಜ್ಜಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read