ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ನಾನೂ ರಾಜೀನಾಮೆ ಕೊಡ್ತೀನಿ. ನೀನು ರಾಜೀನಾಮೆ ಕೊಡು. ಇಬ್ಬರೂ ಚುನಾವಣೆಗೆ ಹೋಗೋಣ ಬಾ ಎಂದು ಸವಾಲು ಹಾಕಿದ್ದಾರೆ.
ನೀನು ಶಿಕಾರಿಪುರದಿಂದಲೇ ಸ್ಪರ್ಧಿಸು, ನಾನು ವಿಜಯಪುರದಿಂದಲೇ ಸ್ಪರ್ಧಿಸುತ್ತೇನೆ. ನಾನು ಕೇವಲ ಭಗವಾಧ್ವಜದ ಮೇಲೆ ಗೆಲ್ಲುತ್ತೇನೆ. ವಿಜಯೇಂದ್ರ ನಿನಗೆ ತಾಕತ್ ಇದ್ಯಾ? ಎಂದು ಕೇಳಿದ್ದಾರೆ. ಹಿಂದೂಗಳ ಕಗ್ಗೊಲೆಯಾಗುತ್ತಿದೆ. ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರ ಯಾವುದೂ ಶಾಶ್ವತ ಅಲ್ಲ. ಎಲ್ಲರೂ ಒಂದು ದಿನ ಹೋಗಲೇಬೇಕು. ಆದರೆ ಒಳ್ಳೆಯ ರೀತಿಯಲ್ಲಿ ರಾಜಕಾರಣ ಮಾಡೋಣ ಎಂದು ಹೇಳಿದರು.
ಪೂಜ್ಯರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಸಂಸ್ಕೃತಿ ನಮ್ಮದಲ್ಲ. ಯಾರು ಪೂಜ್ಯರನ್ನು ರಾಜಕೀಯಕ್ಕೆ ಬಳಸಿಕೊಳ್ತಾರೆ ಗೊತ್ತಿದೆ. ಮಠಮಾನ್ಯಗಳಿಗೆ ಹಣ ನೀಡಿದ್ದು ನಾವೇ ಎಂದು ಹೇಳಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲಿಯವರೆಗೆ ಬಿಜೆಪಿ ಒಂದು ಕುಟುಂಬದಿಂದ ಮುಕ್ತವಾಗುವುದಿಲ್ಲವೋ ಅಲ್ಲಿಯವರೆಗೆ ನಾನು ಬಿಜೆಪಿಗೆ ಮರು ಸೇರ್ಪಡೆಯಾಗಲ್ಲ ಎಂದರು.