ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯನವರ ಬಜೆಟ್ ನಿಂದ ಯಾರೀಗೂ ಅನುಕೂಲವಿಲ್ಲ. ಕೃಷೀ ಕ್ಷೇತ್ರ, ರೈತರಿಗೆ ಅನುಕೂಲವಿಲ್ಲ, ಮಹಿಳೆಯರು, ಯುವಕರ ಅಭಿವೃದ್ಧಿ, ಉದ್ಯೋಗದ ಬಗ್ಗೆ ಯಾವುದೇ ಹೇಳಿಕೆಗಳಿಲ್ಲ. ಇದು ಅಭಿವೃದ್ಧಿಗೆ ಪೂರಕವಲ್ಲದ ನಿರಾಶಾದಾಯ ಬಜೆಟ್ ಎಂದರು.
ಮುಸ್ಲಿಂರ ಓಲೈಕೆ ಮಾಡುವ ಮಟ್ಟಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ. ಅದಕ್ಕಾಗಿ ಬಜೆಟ್ ನಲ್ಲಿ ಮುಸ್ಲಿಂರಿಗೆ ಮೀಸಲಾತಿ ಘೋಷಿಸಿದ್ದಾರೆ. ಈ ಮಟ್ತಕ್ಕೆ ಇಳಿಯುತ್ತಾರೆ ಎಂದು ನಾನು ಎಣಿಸಿರಲಿಲ್ಲ ಎಂದು ಕಿಡಿಕಾರಿದರು.