Ayudha Pooja : ಸಾರಿಗೆ ಬಸ್ ಗಳ ಪೂಜೆಗೆ 500 ರೂಗೆ ಬೇಡಿಕೆಯಿಟ್ಟ ನೌಕರರು..!

ಬೆಂಗಳೂರು : ಸೋಮವಾರ ರಾಜ್ಯದೆಲ್ಲೆಡೆ ಆಯುಧ ಪೂಜೆ ನಡೆಯಲಿದ್ದು, ತಯಾರಿ ನಡೆಯುತ್ತಿದೆ. ಇದೀಗ ಸರ್ಕಾರಿ  ಬಸ್ ಗಳ  ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಬೇಡಿಕೆಯಿಡಲಾಗಿದೆ.

ಪ್ರತಿ ವರ್ಷ ನಿಗಮಗಳು ಬಸ್ಗಳಿಗೆ ತಲಾ 100 ರೂ. ಬಿಡುಗಡೆ ಮಾಡುತ್ತಿತ್ತು, ಈ ಬಾರಿ ಹೂವುಗಳ ಬೆಲೆ ಏರಿಕೆ ಹಿನ್ನೆಲೆ ಪ್ರತಿ   ಬಸ್ ಗೆ  500 ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ.  ಆಯುಧ ಪೂಜೆ ಮಾಡಲು ಹೂ ಹಣ್ಣು, ಬಾಳೆಕಂದು, ತೆಂಗಿನಕಾಯಿ, ಬೂದು ಕುಂಬಳಕಾಯಿ ಎಲ್ಲಾ ಬೇಕು. 100 ರೂ ಸಾಕಾಗುವುದಿಲ್ಲ, ಎಲ್ಲಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಪ್ರತಿ  ಬಸ್ ಗೆ  500 ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಇನ್ನೂ, ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್ಗಳಲ್ಲಿ ಬಳಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read