BIG UPDATE: ಅಯೋಧ್ಯೆಯಿಂದ ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ; ಆರೋಪಿಗಳು ಪೊಲೀಸ್ ವಶಕ್ಕೆ; FIR ದಾಖಲು

ಬಳ್ಳಾರಿ: ಅಯೋಧ್ಯೆಯಿಂದ ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಬೆಂಕಿ ಹಚ್ಚುವ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಅಯೋಧ್ಯೆಗೆ ತೆರಳಿ ಭಗವಾನ್ ಶ್ರೀ ರಾಮಲಲ್ಲಾ ದರ್ಶನ ಪಡೆದು ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಮೂವರು ಕಿಡಿಗೇಡಿಗಳು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು.

ಸುಮಾರು 1400 ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ವಾಪಾಸ್ ಆಗುತ್ತಿದ್ದರು, ವಿಜಯನಗರ ಹೊಸಕೋಟೆ ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಅನ್ಯಕೋಮಿನ ಮೂವರು ಯುವಕರು ರೈಲು ಹತ್ತಿದ್ದಾರೆ. ಅಯೋದ್ಯೆ ಪ್ರಯಾಣಿಕರಿಗೆ ಮೀಸಲಿದ್ದ ಬೋಗಿ ನಂ.2ರಲ್ಲಿ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಅದು ಅಯೋಧ್ಯೆ ಯಾತ್ರಿಕರಿಗೆ ಮೀಸಲಿರುವ ಬೋಗಿ ಬೇರೆಯವರಿಗೆ ಅವಕಾಶವಿಲ್ಲ ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ.

ಈ ವೇಳೆ ಕಿಡಿಗೇಡಿಗಳು ಪ್ರಯಾಣಿಕರ ಹಾಗೂ ಯಾತ್ರಿಕರ ಜೊತೆ ಅನಗತ್ಯವಾಗಿ ಜಗಳ ಮಾಡಿ ಧಮ್ಕಿ ಹಾಕಿದ್ದಾರೆ. ಬೋಗಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕುತ್ತಿದ್ದಂತೆ ರೈಲು ನಿಲ್ಲಿಸಿ, ಯಾತ್ರಿಕರು ಪ್ರತಿಭಟನೆ ನಡೆಸಿದ್ದಾರೆ. ಮೂವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಈ ವೇಳೆ ಯಾತ್ರಿಕರ ಪ್ರತಿಭಟನೆಗೆ ಹಿಂದೂ ಪರ ಸಂಘಟನೆ, ಬಜರಂಗದಳ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸದೇ ಪೊಲೀಸರು ಬಿಟ್ಟಿ ಕಳುಹಿಸಿದ್ದರು ಎನ್ನಲಾಗಿದೆ. ಈ ವೇಳೆ ಯಾತ್ರಿಕರು ಪ್ರತಿಭಟನೆ ತೀವ್ರಗೊಳಿಸಿದ್ದರು. ಘಟನಾ ಸ್ಥಳಕ್ಕೆ ವಿಜಯನಗರ ಎಸ್ ಪಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಇದೀಗ ಬಳ್ಳಾರಿ ಬಳಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read