ಇಂಡಿಯನ್ ಐಡಲ್ ಸೀಸನ್ 13 ರ ವಿಜೇತರಾಗಿ ಹೊರಹೊಮ್ಮಿದ ಅಯೋಧ್ಯೆ ನಿವಾಸಿ ರಿಷಿ ಸಿಂಗ್

ಹಿಂದಿ ಟೆಲಿವಿಷನ್ ನ ಪ್ರಖ್ಯಾತ ಕಾರ್ಯಕ್ರಮ ಇಂಡಿಯನ್ ಐಡಲ್ ಸೀಸನ್ 13ರಲ್ಲಿ ಅಯೋಧ್ಯೆಯ ರಿಷಿ ಸಿಂಗ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಕಾರ್ಯಕ್ರಮದ ಆರಂಭದಿಂದಲೂ ಗಮನ ಸೆಳೆದಿದ್ದ ರಿಷಿ ಸಿಂಗ್ ಜಯಗಳಿಸಿದ್ದು 25ಲಕ್ಷ ರೂಪಾಯಿ ಮತ್ತು ಕಾರನ್ನು ಬಹುಮಾನವಾಗಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ದೇಬಾಸ್ಮಿತಾ ರಾಯ್ ಮತ್ತು ಚಿರಾಗ್ ಕೊತ್ವಾಲ್ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಜನಪ್ರಿಯ ರಿಯಾಲಿಟಿ ಶೋಗೆ ಹಿಮೇಶ್ ರೇಶಮಿಯಾ, ವಿಶಾಲ್ ದಾದ್ಲಾನಿ ಮತ್ತು ನೇಹಾ ಕಕ್ಕರ್ ತೀರ್ಪುಗಾರರಾಗಿದ್ದರು. ಅರಿಜಿತ್ ಸಿಂಗ್ ಅವರ ಧ್ವನಿ ಮತ್ತು ಗಾಯನ ಶೈಲಿಯ ಅಭಿಮಾನಿಯಾಗಿರುವ ರಿಷಿ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಅಭಿಮಾನಿಯೂ ಹೌದು. ವಿರಾಟ್ ಕೊಹ್ಲಿ, ರಿಷಿ ಸಿಂಗ್ ರನ್ನ ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿರುವುದು ಸಹ ಗಮನಾರ್ಹ.

ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ರಿಷಿ ಸಿಂಗ್ ತನ್ನ ಬದುಕಿನ ಬಗ್ಗೆ ತಿಳಿಸಿದ ಒಂದು ಸತ್ಯ ಕಾರ್ಯಕ್ರಮದ ಆರಂಭದಲ್ಲಿ ಬಹುಮುಖ್ಯ ಅಂಶವಾಗಿತ್ತು. ರಿಷಿಯನ್ನು ಆತನ ಪೋಷಕರು ಹೇಗೆ ದತ್ತು ತೆಗೆದುಕೊಂಡರು ಎಂಬುದನ್ನ ತಿಳಿಸಿದ್ದ ಗಾಯಕ ನನ್ನನ್ನು ದತ್ತು ತೆಗೆದುಕೊಂಡು ಈ ಹಂತಕ್ಕೆ ತನ್ನ ಪೋಷಕರು ಕರೆತರದಿದ್ದರೇ, ನಾನು ಎಲ್ಲೋ ಕೊಳೆಯುತ್ತಿದ್ದೆ, ಅಥವಾ ಬಹುಶಃ ಸಾಯುತ್ತಿದ್ದೆ ಎಂದಿದ್ದರು.

ಈ ಸತ್ಯ ಕೂಡ ಆತನಿಗೆ ಈ ಕಾರ್ಯಕ್ರಮಕ್ಕೆ ಬಂದ ಬಳಿಕ ತಿಳಿಯಿತು ಎಂದು ಹೇಳಿದ್ದರು. ಇಂಡಿಯನ್ ಐಡಲ್ ಸೀಸನ್ 13 ಗೆದ್ದ ರಿಷಿ ಸಿಂಗ್ ಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read