BIG NEWS: ಮತ್ತೆ ಬಿಜೆಪಿ ಸರ್ಕಾರ ಎಂದು ಚುನಾವಣೆಗೆ ಮೊದಲೇ ಜಗತ್ತಿಗೇ ಗೊತ್ತಾಗಿದೆ: ಈಗಾಗಲೇ ವಿದೇಶಗಳಿಂದ ಆಹ್ವಾನ ಬರುತ್ತಿದೆ: ಮೋದಿ

ನವದೆಹಲಿ: ಲೋಕಸಭೆ ಚುನಾವಣೆ ನಂತರ ಬನ್ನಿ ಎಂದು ವಿದೇಶಗಳಿಂದ ‘ಈಗಾಗಲೇ’ ಆಹ್ವಾನಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿ ನೀಡಲು ಈಗಾಗಲೇ ವಿದೇಶಗಳಿಂದ ಆಹ್ವಾನಗಳು ಬರುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ ಎಂಬುದು ಜಗತ್ತಿಗೆ ತಿಳಿದಿದೆ ಎಂಬುದನ್ನು ಆಹ್ವಾನಗಳು ತೋರಿಸುತ್ತವೆ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಲೋಕಸಭೆ ಚುನಾವಣೆ ಇನ್ನೂ ನಡೆಯಬೇಕಿದೆ. ಆದರೆ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ಗಾಗಿ ನನಗೆ ಈಗಾಗಲೇ ವಿದೇಶಗಳಿಂದ ಆಹ್ವಾನಗಳಿವೆ. ಇದರ ಅರ್ಥ ಏನು ಅಂದರೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇತರ ದೇಶಗಳಿಗೂ ಇದೆ. ಅವರಿಗೂ ಮೋದಿ ಮತ್ತೆ ಬರ್ತಾರೆ ಅಂತ ಗೊತ್ತು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read