ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ ಈಶ್ವರಪ್ಪ: ಮಾಜಿ ಸಂಸದ ಆಯನೂರು ಮಂಜುನಾಥ್

ಶಿವಮೊಗ್ಗ: ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಮತಗಳನ್ನು ಕಬಳಿಸುವ ಹುನ್ನಾರದಿಂದ ಹಿಂದುಳಿದ ನಾಯಕನ ಮುಖವಾಡವನ್ನು ಈಶ್ವರಪ್ಪನವರಿಗೆ ಹಾಕಿ ಬಂಡಾಯದ ಆಟ ಹೂಡಿದ್ದಾರೆ. ಬಿಜೆಪಿಯವರ ಈ ಆಟ ನಡೆಯುವುದಿಲ್ಲ. ಡಮ್ಮಿ ಅಭ್ಯರ್ಥಿ ಈಶ್ವರಪ್ಪನವರ ಮುಖವಾಡ ಕಳಚಿ ಬೀಳುತ್ತದೆ ಎಂದು ಹೇಳಿದ್ದಾರೆ.

ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಬಿಜೆಪಿಯವರ ಷಡ್ಯಂತ್ರ. ಕಾಂಗ್ರೆಸ್ ಮತಗಳನ್ನು ಕಿತ್ತುಕೊಳ್ಳುವ ಕುತಂತ್ರ ಇದರಲ್ಲಿ ಅಡಗಿದೆ. ಯಡಿಯೂರಪ್ಪನವರೇ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಮಾಡಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಈಶ್ವರಪ್ಪ, ಯಡಿಯೂರಪ್ಪನವರ ನಡುವಿನ ಹೊಂದಾಣಿಕೆಯಿಂದ ಈಶ್ವರಪ್ಪ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಈಶ್ವರಪ್ಪನವರಿಗೆ ಈಶಾನ್ಯದ ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರ ಹುದ್ದೆ. ಅಥವಾ ಅವರ ಪುತ್ರನಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬಹುದು. ಈಶ್ವರಪ್ಪ ಬೆನ್ನಹಿಂದೆ ಇಡಿ, ಐಟಿ ಬಂದೂಕು ಇಟ್ಟುಕೊಂಡೇ ಬಿಜೆಪಿ ವರಿಷ್ಠರು ಅವರನ್ನು ಆಟವಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read