ಒತ್ತಡ ದೂರವಿಟ್ಟು ಶಾಂತವಾಗಿ ಊಟ ಮಾಡಿ

ನೀವು ಒತ್ತಡದಲ್ಲಿ ಇದ್ದಾಗ ಹೆಚ್ಚು ಆಹಾರ ಸೇವಿಸುತ್ತೀರಿ, ಇದು ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೇ?

ಹೌದೆನ್ನುತ್ತದೆ ಸಂಶೋಧನೆ. ದಿನನಿತ್ಯದ ಜಂಜಾಟಗಳಲ್ಲಿ ಹಸಿವಾಗುವುದು ಮತ್ತು ಎಷ್ಟು ಹೊಟ್ಟೆಗೆ ತಿನ್ನಬೇಕು ಎನ್ನುವತ್ತ ಹೆಚ್ಚು ಗಮನ ಕೊಡದಿರುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಈ ಸಮಯದಲ್ಲಿ ಹೆಚ್ಚು ಕ್ಯಾಲರಿಯುಕ್ತ ಆಹಾರಗಳು ಹೊಟ್ಟೆಗೆ ಸೇರಿಕೊಳ್ಳುತ್ತವೆ. ಇದಕ್ಕೆ ಸ್ಟ್ರೆಸ್ ಇಟಿಂಗ್ (stress eating) ಎನ್ನುತ್ತಾರೆ.

ಒತ್ತಡದಲ್ಲಿದ್ದೇವೆ ಎಂಬ ಕಾರಣಕ್ಕೆ ಊಟದತ್ತ ಗಮನ ಕೊಡದೆ ಕೈಗೆ ಸಿಕ್ಕಿದ್ದೆಲ್ಲಾ ತಿನ್ನುವುದು ದೊಡ್ಡ ತಪ್ಪು. ತೂಕ ಹೆಚ್ಚಲು ಇದೇ ಮುಖ್ಯ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಅವರ ಅಧ್ಯಯನದ ಪ್ರಕಾರ, ಒತ್ತಡದಲ್ಲಿ ಇರುವವರ ಆಹಾರ ಸೇವನೆಯಲ್ಲಿ ಕ್ಯಾಲರಿ ಹಾಗೂ ಕೊಬ್ಬಿನಂಶ ಹೆಚ್ಚಿರುತ್ತದೆ. ಆ ಸಂದರ್ಭದಲ್ಲಿ ಸೇವಿಸಿದ ಆಹಾರ ಕೆಟ್ಟ ಕೊಬ್ಬಾಗಿ ಪರಿವರ್ತನೆ ಹೊಂದಿ ದೇಹ ತೂಕವನ್ನು ಹೆಚ್ಚಿಸುತ್ತದೆ. ಅದೇ ಆಹಾರವನ್ನು ಒತ್ತಡವಿಲ್ಲದ ಸಂದರ್ಭದಲ್ಲಿ ಸೇವಿಸಿದರೆ ಕೊಬ್ಬು ಉಂಟಾಗುವುದಿಲ್ಲ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

ಹಾಗಾಗಿ ಯಾವುದೇ ಕಾರಣಕ್ಕೂ ಒತ್ತಡದಲ್ಲಿರುವಾಗ ಊಟ, ತಿಂಡಿ ಮಾಡಬೇಡಿ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಯೋಗ, ಧ್ಯಾನಗಳನ್ನು ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read