PM Modi Birthday: ಗುಜರಾತಿನ ಸೂರತ್ ಆಟೋ ಚಾಲಕರಿಂದ ಪ್ರಯಾಣಿಕರಿಗೆ ಉಚಿತ ಸೇವೆ

Auto discounts on PM's birthday

ಪ್ರಧಾನಿ ನರೇಂದ್ರ ಮೋದಿಯವರು ಇಂದು 73ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶದಾದ್ಯಂತ ವಿವಿಧ ದೇವಾಲಯಗಳಲ್ಲಿ ಅವರ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಗುಜರಾತಿನ ಸೂರತ್ ಆಟೋ ಚಾಲಕರು ಇಂದು ಪ್ರಯಾಣಿಕರಿಗೆ ಉಚಿತ ಸೇವೆ ನೀಡಲಿದ್ದಾರೆ.

ಈ ಕುರಿತಂತೆ ಗುಜರಾತ್ ಶಾಸಕ ಪೂರ್ಣೆಶ್ ಮೋದಿ ಮಾಹಿತಿ ನೀಡಿದ್ದು, ನರೇಂದ್ರ ಮೋದಿಯವರ 73 ನೇ ಹುಟ್ಟುಹಬ್ಬದ ಅಂಗವಾಗಿ 73 ಮಂದಿ ಆಟೋ ಚಾಲಕರು ಪ್ರಯಾಣಿಕರಿಗೆ ಸಂಪೂರ್ಣವಾಗಿ ಉಚಿತ ಸೇವೆ ಒದಗಿಸುತ್ತಿದ್ದರೆ, 1000 ಮಂದಿ ಆಟೋ ಚಾಲಕರು ಶೇಕಡ 30 ರಿಯಾಯಿತಿ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಒಡಿಶಾದಲ್ಲಿ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್, ನರೇಂದ್ರ ಮೋದಿ ಅವರ ಮರಳು ಕಲಾಕೃತಿಯನ್ನು ರಚಿಸಿದ್ದು, ಇಂದು ವಿಶ್ವಕರ್ಮ ಜಯಂತಿಯೂ ಆಗಿರುವ ಕಾರಣ ವಿಶ್ವಕರ್ಮ ದೇವ, ಮೋದಿಯವರನ್ನು ಆಶೀರ್ವದಿಸುವಂತೆ ಚಿತ್ರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read