ಬೆಂಗಳೂರು: ತನ್ನ ಸ್ನೇಹಿತನ ಜೊತೆ ಅಂಗಡಿಯ ಮುಂದೆ ನಿಂತಿದ್ದ ಅಪರಿಚಿತ ಯುವತಿಗೆ ಕಿರುಕುಳ ನೀಡುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಮಣಿ ಬಂಧಿತ ಆರೋಪಿ. ಯುವತಿಯ ಜೊತೆ ಸೆಲ್ಫೀ, ಮೊಬೈಲ್ ನಂಬರ್ ಕೇಳುತ್ತಿದ್ದ ಆರೋಪಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಪುಲಕೇಶಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಸದ್ಯ ಆರೋಪಿ ಮಣಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.