ಬೆಂಗಳೂರು: ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನನ್ನು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹನುಮಂತಪ್ಪ ಹೆಚ್.ತಳವಾರ ಬಂಧಿತ ಆಟೋ ಚಾಲಕ. ಯುವತಿಯೊಬ್ಬಳು ಜೆ.ಪಿ.ನಗರದ ಏಳನೇ ಹಂತದಿಂದ ಆಟೋ ಬುಕ್ ಮಾಡಿದ್ದಳು. ಆಟೋ ಲೊಕೇಷನ್ ಗೆ ಬಂದಾಗ ಯುವತಿ ಆಟೋದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಆಟೋ ಚಾಲಕ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಜ್ವರ ಇದೆಯಾ ಎಂದು ಯುವತಿಯ ಹಣೆ ಮುಟ್ಟಿ, ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ. ನೀನು ಥೇಟ್ ಹಿರೋಯಿನ್ ತರಹ ಇದ್ದೀಯಾ ಎಂದಿದ್ದಾನಂತೆ. ತಕ್ಷಣ ಯುವತಿ ಆತನಿಂದ ತಪ್ಪಿಸಿಕೊಂಡು ಆಟೋದಿಂದ ಇಳಿದು ಓಡಿಹೋಗಿದ್ದಾಳೆ.
ಯುವತಿ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರಿನ ಆಧಾರದ ಮೇಲೆ ಕಾಮುಕ ಆಟೋ ಚಾಲಕನ್ನು ಪೊಲೀಸರು ಬಂಧಿಸಿದ್ದಾರೆ.