1784 ರ ಕಬಾಬ್ ಪಾಕ ವಿಧಾನದ ಮಾಹಿತಿಯೊಂದು ಇದೀಗ ವೈರಲ್ ಆಗಿದೆ. ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಅವರ ಖಾಸಗಿ ಡೈರಿಯಿಂದ ಇದನ್ನು ಶೇರ್ ಮಾಡಲಾಗಿದೆ. ಬರಹಗಾರರಾದ ಇರಾ ಮುಖೋಟಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಮಾಂಸ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೊಟ್ಟೆಯ ಹಳದಿ, ಮುಂತಾದ ಪದಾರ್ಥಗಳನ್ನು ಬರೆದಿರುವುದನ್ನು ಕಾಣಬಹುದು. ಈ ಪದಾರ್ಥಗಳನ್ನು 5 ಅಥವಾ 6 ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಇದನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಕಲ್ಲಿನ ಮೇಲೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಾದ ನಂತರ ಬೆಣ್ಣೆಯಲ್ಲಿ ಫ್ರೈ ಮಾಡಿ, ಅವು ಬಾಣಲೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಬರೆಯಲಾಗಿದೆ.
ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ, ಟ್ವೀಟ್ 1.6 ಸಾವಿರ ವೀಕ್ಷಣೆಗಳನ್ನು ಮತ್ತು 1287 ಲೈಕ್ಸ್ ಸ್ವೀಕರಿಸಿದೆ. ಕಬಾಬ್ ರೆಸಿಪಿಯ ಈ ಹಳೆಯ ಟಿಪ್ಪಣಿಯಿಂದ ಇಂಟರ್ನೆಟ್ ಬಳಕೆದಾರರು ಸಾಕಷ್ಟು ಕಮೆಂಟ್ ಹಾಕುತ್ತಿದ್ದಾರೆ. ವಿಶ್ವದ ಕೆಲವು ರುಚಿಕರವಾದ ಕಬಾಬ್‌ಗಳು ಲಖನೌದಲ್ಲಿ ಇನ್ನೂ ಕಂಡುಬರುತ್ತವೆ ಎಂದು ಮತ್ತೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.
https://twitter.com/mukhoty/status/1628775846910599171?ref_src=twsrc%5Etfw%7Ctwcamp%5Etweetembed%7Ctwterm%5E1628775846910599171%7Ctwgr%5E66096c684616036ccc742ed23b701052df80e12a%7Ctwcon%5Es1_&ref_url=https%3A%2F%2Fd-14559702481650223512.ampproject.net%2F2302031721000%2Fframe.html
https://twitter.com/mukhoty/status/1628775846910599171?ref_src=twsrc%5Etfw%7Ctwcamp%5Etweetembed%7Ctwterm%5E1628855336995115009%7Ctwgr%5E6fcfe1aee579382a2765f00c22848bea636d7aa7%7Ctwcon%5Es2_&ref_url=https%3A%2F%2Fd-14559702481650223512.ampproject.net%2F2302031721000%2Fframe.html
https://twitter.com/mukhoty/status/1628775846910599171?ref_src=twsrc%5Etfw%7Ctwcamp%5Etweetembed%7Ctwterm%5E1629037671615193088%7Ctwgr%5E378480136734d1c9b992888b9394bbced93b3380%7Ctwcon%5Es2_&ref_url=https%3A%2F%2Fd-14559702481650223512.ampproject.net%2F2302031721000%2Fframe.html