ಆತ್ಮೀಯ ಸ್ನೇಹಿತೆಯನ್ನು ವಿವಾಹವಾದ ಆಸೀಸ್ ಮಹಿಳಾ ಕ್ರಿಕೆಟರ್

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಜೆಸ್ಸಿಕಾ ಜೊನಾಸೆನ್ ಹವಾಯಿಯ ಮ್ಯಾಜಿಕ್ ಐಲ್ಯಾಂಡ್‌ನಲ್ಲಿ ನಡೆದ ಅದ್ಭುತ ವಾಟರ್‌ಸೈಡ್ ಸಮಾರಂಭದಲ್ಲಿ ಬಹುಕಾಲದ ಗೆಳೆತಿ ಸರಾಜ್ ವೇರ್‌ನನ್ನು ವಿವಾಹವಾದ್ರು.

ಈ ಸಂತೋಷದ ಸುದ್ದಿಯನ್ನು ಜೋನಾಸೆನ್ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ವಿಶೇಷ ದಿನದ ಫೋಟೋವನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡ್ರು. ಮೊದಲಿಗೆ ಮದುವೆಯನ್ನು 2020 ರಲ್ಲಿ ನಿಗದಿಪಡಿಸಲಾಗಿತ್ತು. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ದಂಪತಿ ತಮ್ಮ ಮದುವೆಯನ್ನು ಎರಡು ಬಾರಿ ಮುಂದೂಡಬೇಕಾಯಿತು. ಏಪ್ರಿಲ್ 6 ರಂದು, ಅವರು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಏಪ್ರಿಲ್ 6 ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ ಎಂದು ಜೆಸ್ಸಿಕಾ ಜೊನಾಸೆನ್ ಟ್ವೀಟ್ ಮಾಡಿದ್ದಾರೆ. ಜೆಸ್ಸಿಕಾ ಮತ್ತು ಸಾರಾ ಸುಂದರವಾದ ಸ್ಥಳದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆಯ ಫೋಟೋಗಳು ಅಭಿಮಾನಿಗಳ ಮನಸೂರೆಗೊಂಡಿದೆ. ಸಾಂಪ್ರದಾಯಿಕ ಮದುವೆಯ ಉಡುಪನ್ನು ಧರಿಸದೆ ವಧು ಪ್ಯಾಂಟ್, ಶರ್ಟ್‌ ಧರಿಸಿದ್ದು ವಿಶೇಷವಾಗಿತ್ತು.

ಒಂದು ದಿನದ ಹಿಂದೆ ಹಂಚಿಕೊಂಡ ನಂತರ, ಟ್ವೀಟ್ 1.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಅಭಿಮಾನಿಗಳು ವಿವಾಹದ ಶುಭಾಶಯಗಳನ್ನು ಕೋರಿ ಕಾಮೆಂಟ್ ಮಾಡಿದ್ದಾರೆ.

https://twitter.com/JJonassen21/status/1646695388534173697?ref_src=twsrc%5Etfw%7Ctwcamp%5Etweetembed%7Ctwterm%5E1646695388534173697%7Ctwgr%5E6f348b4eed0db6f7cb65b71f9d0275cffc44076c%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Faustralian-cricketer-jessica-jonassen-marries-best-friend-sarah-wearn-in-hawaii-see-pics-101681543990813.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read