SHOCKING : ಆಂಟಿ ಪ್ರೀತ್ಸೆ…! ಅಂತ ಸುತ್ತಾಟ : ಕೊಲೆಗೈದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಮಂಡ್ಯದ ಯುವಕ.!

ಮಂಡ್ಯ : ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಘಟನೆ ಮಂಡ್ಯದ ಕರೋಟಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನ ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ. ಇನ್ಸ್ ಗ್ರಾಮ್ ನಲ್ಲಿ ಪ್ರೀತಿಯನ್ನು ಪ್ರೀತಿ ಮಾಡಿದ ಯುವಕ, ನಂತರ ಆಕೆಯ ಜೊತೆ ಸುತ್ತಾಡಿದ್ದಾನೆ.

ಪ್ರೀತಿಗೆ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರು, ಮಂಡ್ಯ ಅಂತ ಟ್ರಿಪ್ ಹೋಗಿದ್ದ ಇಬ್ಬರು ಜಾಲಿಯಾಗಿ ಸಮಯ ಕಳೆದಿದ್ದರು. ನಂತರ ಅದೇನು ಆಯ್ತೋ ಗೊತ್ತಿಲ್ಲ. ಕೆ ಆರ್ ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಈತ ಮಹಿಳೆಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ. ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಪುನೀತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ . ಒಟ್ಟಿನಲ್ಲಿ ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದ ಮಹಿಳೆ ದುರಂತ ಅಂತ್ಯ ಕಂಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read