Sirimane Falls : ಪ್ರವಾಸಿಗರ ಗಮನಕ್ಕೆ : ಕಿಗ್ಗಾ ‘ಸಿರಿಮನೆ ಫಾಲ್ಸ್’ ಗೆ ಪ್ರವೇಶ ನಿರ್ಬಂಧ

ಶೃಂಗೇರಿ : ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಿರಿಮನೆ ಫಾಲ್ಸ್ ನಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಭಾರಿ ಮಳೆಯಿಂದ ಸಿರಿಮನೆ ಜಲಪಾತವು ಮೈದುಂಬಿ ಹರಿಯುತ್ತಿದ್ದು, ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಯಾವುದೇ ಅಪಾಯ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಕೆಲವು ದಿನಗಳವರೆಗೆ ಸಿರಿಮನೆ ಫಾಲ್ಸ್ ಗೆ ಪ್ರವೇಶ ನಿರ್ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದಾಂಗುಡಿ ಇಡುತ್ತಿದ್ದು, ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತ ಮುಂಜ್ರಾಗ್ರತಾ ಕ್ರಮವಾಗಿ ಕೆಲವು ಜಲಪಾತಗಳಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸುತ್ತಿದೆ.

ಕಿಗ್ಗಾ ಸುಂದರ ಜಲಪಾತಗಳನ್ನು ಹೊಂದಿರುವ ಸಣ್ಣ ಹಳ್ಳಿ.ಸಿರಿಮಾನೆ ಫಾಲ್ಸ್ ಸಿರಿಮಾನೆ ಜಲಪಾತವು ಶೃಂಗೇರಿಯ ಸಮೀಪದ ಕಿಗ್ಗಾದಿಂದ 5 ಕಿ.ಮೀ ದೂರದಲ್ಲಿದೆ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಪಶ್ಚಿಮ ಘಟ್ಟದ ಆಳವಾದ ಅರಣ್ಯದಲ್ಲಿರುವ ಜನಪ್ರಿಯ ಜಲಪಾತಗಳು. ಇದು ಬೆಂಗಳೂರಿನಿಂದ 300 ಕಿ.ಮೀ ಮತ್ತು ಕಿಗ್ಗಾ ನಿಂದ 5 ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಹಲವು ಜಲಪಾತಗಳಲ್ಲಿ ಒಂದಾಗಿದೆ

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read