ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2025-26 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಶ್ರಮಶಕ್ತಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆಗೆ ಸಾಲ ಮತ್ತು ಸಹಾಯಧನ ಹಾಗೂ ವ್ಯಾಪಾರ ಮತ್ತು ಉದ್ಯಮಗಳಿಗೆ ನೇರ ಸಾಲ ಯೋಜನೆ ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಸಾಂತ್ವನ ಯೋಜನೆ ಹಾಗೂ ಮಹಿಳಾ ಸ್ವ ಸಹಾಯ ಸಂಘ ಗುಂಪುಗಳಿಗೆ ಸಹಾಯಧನ ನೀಡಲಾಗುತ್ತದೆ. ಸಾಲ ಹಾಗೂ ಸಹಾಯಧನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಿಗಮದ ವೆಬ್ಸೈಟ್ https://kmdconline.karnanataka.gov.in/ ಮೂಲಕ ಆನ್ಲೈನ್ ಆರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮೌಲಾನಾ ಅಜಾದ್ ಭವನ, ಗ್ರಾಮಾಂತರ ಪೋಲೀಸ್ ಠಾಣೆ ಹತ್ತಿರ, ಎಫ್ಎಂಸಿ ಕಾಲೇಜು ರಸ್ತೆ, ಮಡಿಕೇರಿ ಇಲ್ಲಿಗೆ ಹಾಗೂ ದೂರವಾಣಿ ಸಂಖ್ಯೆ 08272-201449, 8277944222, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ 9972799091, 9900731037, 8548068519 ನ್ನು ಸಂಪರ್ಕಿಸಬಹುದು.
ವಿಶೇಷ ಸೂಚನೆ : ಕಚೇರಿಯಿಂದ ಸಂಪರ್ಕಿಸುವ ಮೊದಲು ಸಲ್ಲಿಸಿರುವ ಅರ್ಜಿ ಹಾಗೂ ದಾಖಲಾತಿಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವಂತಿಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್, 21 ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.