ವಿದ್ಯಾರ್ಥಿಗಳ ಗಮನಕ್ಕೆ : ‘DUPLICATE TC ’ ಪಡೆಯುವ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಸದ್ಯ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಮಕ್ಕಳನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ನೋಂದಣಿ ಮಾಡಿಸಲು ಟಿಸಿ ಬೇಕೇ ಬೇಕು.

ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು (TC) ವಿದ್ಯಾರ್ಥಿಗೆ ಮತ್ತೊಂದು ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ವ್ಯಾಸಂಗ ಮಾಡಿದ ಸಂಸ್ಥೆಯಿಂದ ನೀಡಲಾಗುತ್ತದೆ. ಹಾಗಾದರೆ ಒಂದು ವೇಳೆ ಒರಿಜಿನಲ್ ಟಿಸಿ ಕಳೆದುಕೊಂಡರೆ ಏನು ಮಾಡಬೇಕು. ಇಲ್ಲಿದೆ ನೋಡಿ ಮಾಹಿತಿ .

ವಿದ್ಯಾರ್ಥಿಯ ಜೀವನದಲ್ಲಿ TC ಯ ತನ್ನದೇ ಆದ ಮಹತ್ವವನ್ನು ಹೊಂದಿದೆ. ವಿದ್ಯಾರ್ಥಿಯು ತನ್ನ ಟಿಸಿ ಪಡೆದಿದ್ದರೂ ಕಳೆದುಹೋದರೆ, ಅವನು/ಅವಳು ನಕಲು ಪಡೆಯಬಹುದು.2 ನೇ ವರ್ಗಾವಣಿ ಪ್ರಮಾಣ ಪತ್ರವನ್ನು ಪಡೆಯಲು ಈ ಕೆಳಕಾಣಿಸಿದ ದಾಖಲೆಗಳನ್ನು ಅರ್ಜಿಯ ಜೊತೆ ಶಾಲೆಗೆ ಕಡ್ಡಾಯವಾಗಿ ಲಗತ್ತಿಸಿ ಕೊಡಬೇಕು.

1) ಟಿ.ಸಿ. ಬೇಡಿಕೆಯ ಅರ್ಜಿಯ ಪ್ರತಿ
2) ಟಿ ಸಿ. ಕಳೆದು ಹೋಗಿರುವ ಬಗ್ಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು . ದಾಖಲಿಸಿದ ಸ್ವೀಕೃತಿ ಪ್ರತಿ .
3) ಎರಡನೇ ಟಿ.ಸಿ. ಪಡೆಯುವ ಉದ್ದೇಶ ಹಾಗೂ ಮೊದಲನೆಯ ಟಿ .ಸಿ, ಕಳೆದು ಹೋಗಿರುವ ಬಗ್ಗೆ ನೋಟರಿಯಿಂದ ಅಫಿಡವಿಟ್ ಪ್ರತಿ .
4) ಡುಪ್ಲಿಕೇಟ್ 9.ಸಿ. ಪಡೆಯಲು ನಿಗದಿತ ಶುಲ್ಕ ಪಾವತಿಸಿದ ರಸೀದಿ ತರಬೇಕು .
5) ಚಲನ್ ತುಂಬುವ ಸರ್ಕಾರಿ ಖಾತೆ ಸಂಖ್ಯೆ: 0202-01-102-1-01
6) ಚಲನ್ ತುಂಬಬೇಕಾದ ಹಣ 25-00 ರೂಪಾಯಿಗಳು
7) ಶಾಲೆಯ ಡೈಸ್ ಕೋಡ್ ಸಂಖ್ಯೆ

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read