ಬೆಂಗಳೂರು ; ಸರ್ಕಾರದ ಸಚಿವಾಲಯ/ಇತರೆ ಸರ್ಕಾರಿ ಕಚೇರಿಗಳು/ ನಿಗಮ/ ಮಂಡಳಿ /ಅನ್ಯ ಸೇವೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್- ‘ಎ’ ‘ಬಿ’ ವೃಂದದ ಅಧಿಕಾರಿಗಳು ಹಾಗೂ ಗ್ರೂಪ್-ಸಿ ವೃಂದದ ಸಿಬ್ಬಂದಿ ವರ್ಗದವರು ತಮ್ಮ 2023-24ನೇ ಸಾಲಿನ ಸೇವಾವಧಿಯಲ್ಲಿ ವೃತ್ತಿ ಸಂಬಂಧಿತ/ ಸಾಂಸ್ಕೃತಿಕ/ ಕ್ರೀಡೆ/ ಸಾಹಿತ್ಯ/ ಇತರೆ ಚಟುವಟಿಕೆಯಲ್ಲಿ ಸಾಧನೆ ಮಾಡಿರುವ ಬಗ್ಗೆ ಮಾಹಿತಿಯನ್ನು ದೃಢೀಕೃತ ದಾಖಲೆಯೊಂದಿಗೆ ದಿನಾಂಕ:20.06.2024ರೊಳಗೆ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಇಲಾಖೆಯ ಆಡಳಿತ ವರದಿಯಲ್ಲಿ ಮಾಹಿತಿಯನ್ನು ಸೇರಿಸಲು ಕ್ರಮವಹಿಸಲಾಗುವುದು. ಮಾಹಿತಿಯನ್ನು audit ksad @gmail.com ಕಳುಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.