ಸಾರ್ವಜನಿಕರೇ ಗಮನಿಸಿ : ‘ಶಾಲಾ ಶಿಕ್ಷಣ ಇಲಾಖೆ’ ಆಯುಕ್ತರ ಕಚೇರಿಯ ನೂತನ ವೆಬ್ ಸೈಟ್ ಆರಂಭ

ಬೆಂಗಳೂರು : ‘ಶಾಲಾ ಶಿಕ್ಷಣ ಇಲಾಖೆ’ ಆಯುಕ್ತರ ಕಚೇರಿಯ ನೂತನ ವೆಬ್ ಸೈಟ್ ಆರಂಭವಾಗಿದ್ದು, ಅ.11 ರಿಂದ ಅಧಿಕೃತವಾಗಿ ಸಾರ್ವಜನಿಕರು ಹಾಗೂ ಶಿಕ್ಷಣ ಇಲಾಖೆಯ ಅಧೀನ ಕಚೇರಿಗಳ ಬಳಕೆಗೆ ಮುಕ್ತವಾಗಲಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ನೂತನ ವೈಬ್ ಸೈಟ್ ನ್ನು ಯೋಜನಾ ನಿರ್ದೇಶಕರು, ವೆಬ್ ಪೋರ್ಟಲ್ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ ಬೆಂಗಳೂರು ಮಾರ್ಗದರ್ಶನ ಹಾಗೂ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.  ದಿನಾಂಕ: 11.10.2023 ರಿಂದ ಇಲಾಖೆಯ ಎಲ್ಲಾ ಮಾಹಿತಿ/ ಆದೇಶ ಸುತ್ತೋಲೆ/ ಜನನ ಹಾಗೂ ಇನ್ನಿತರೇ ಮಾಹಿತಿಗಳನ್ನು ಹೊಸ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಇನ್ನು ಮುಂದೆ ಇಲಾಖೆಯ ಎಲ್ಲಾ ಪ್ರಮುಖ ಹಾಗೂ ಅಧೀನ ಕಛೇರಿಗಳು. ಕಡ್ಡಾಯವಾಗಿ ಹೊಸದಾಗಿ ವಿನ್ಯಾಸಗೊಳಿಸಿ ಸೃಜಿಸಲಾಗಿರುವ ಇಲಾಖಾ ವೆಬ್ ಸೈಟ್ ನ್ನು ಬಳಸಲು ತಿಳಿಸಿದ. ಅಲ್ಲದ ಸದರಿ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಕಚೇರಿಯ ಸೂಚನಾ ಫಲಕದಲ್ಲಿ ಹೊಸ ವೆಬ್ ಸೈಟ್ ನ ವಿಳಾಸವನ್ನು ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read