ಸಾರ್ವಜನಿಕರೇ ಗಮನಿಸಿ : ‘ಜಾತಿ ಗಣತಿ ಸಮೀಕ್ಷೆ’ಯಲ್ಲಿ ನಿಮ್ಮ ಮನೆ ಬಿಟ್ಟು ಹೋಗಿದ್ರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ.!


ಬೆಂಗಳೂರು : ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಂಗ್ರಹವಾಗುವ ದತ್ತಾಂಶದಿಂದ ನೂತನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ.

ಹೀಗಾಗಿ ಮನೆಗೆ ಭೇಟಿ ನೀಡುವ ಸಮೀಕ್ಷಾದಾರರಿಗೆ ನಿಮ್ಮ ಕುಟುಂಬದ ಕುರಿತಾದ ನಿಖರ ಮಾಹಿತಿ ನೀಡಿ. ಮುಂದಿನ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗದ ಭದ್ರ ಭವಿಷ್ಯಕ್ಕಾಗಿ ಸಹಕರಿಸಿ. ಸಮೀಕ್ಷೆಯಲ್ಲಿ ನಿಮ್ಮ ಮನೆ ಬಿಟ್ಟು ಹೋಗಿದ್ದರೆ ಕೂಡಲೇ 8050770004ಕ್ಕೆ ಕರೆ ಮಾಡಿ ಸಮೀಕ್ಷೆ ಯಶಸ್ವಿಯಾಗಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ ಮಾಡಿದ್ದು ಯಾಕೆ?

“ಸಮೀಕ್ಷೆ ನಡೆಸಿದ ಬಳಿಕ ವಿವರಗಳನ್ನು ಆ್ಯಪ್ನಲ್ಲಿ ದಾಖಲಿಸಲು ಇರುವುದರಿಂದ, ಆರಂಭದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆಯಾಗಿತ್ತು. ಹೀಗಾಗಿ ಸಮೀಕ್ಷೆ ಸ್ವಲ್ಪ ನಿಧಾನಗತಿಯಲ್ಲಿತ್ತು. ಬೆಂಗಳೂರು ವ್ಯಾಪ್ತಿಯಲ್ಲಿ ಶಿಕ್ಷಕರನ್ನು ಹೆಚ್ಚಾಗಿ ಬಳಸದೆ, ಸರ್ಕಾರಿ ನೌಕರರಿಗೆ ಸಮೀಕ್ಷೆಯ ಜವಾಬ್ದಾರಿಯನ್ನು ನೀಡಿದ್ದೆವು. ದೀಪಾವಳಿ ಸಂದರ್ಭದಲ್ಲಿ ಅವರಿಗೆ ರಜೆ ಇರುವ ಕಾರಣ ಸಮೀಕ್ಷೆ ಅವಧಿ ವಿಸ್ತರಣೆ ಮಾಡಲಾಗಿದೆ.

ಆತುರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆಯೇ ?

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರ್ವೆ ಮಾಡುವುದರಿಂದ, ಆರಂಭದಲ್ಲಿ ಇದಕ್ಕಾಗಿ ಮೂರ್ನಾಲ್ಕು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಕಡಿಮೆ ಎರಡು ಮೂರು ದಿನಗಳು ಬೇಕಾಯಿತು. ಅಲ್ಲದೇ, ಸಮೀಕ್ಷೆಯ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಿದ್ದ ಕಾರಣ, ಅವರಲ್ಲಿ ಈ ಬಗ್ಗೆ ಆರಂಭದಲ್ಲಿ ಉತ್ಸಾಹ ಇರಲಿಲ್ಲ. ನಂತರ ತರಬೇತಿ ಕೊಟ್ಟು ಸಮೀಕ್ಷೆಗೆ ತಯಾರು ಮಾಡಿದೆವು. ಜೊತೆಗೆ ಮಾಧ್ಯಮದಲ್ಲಿ ಸಮೀಕ್ಷೆ ನಡೆಯುವುದಿಲ್ಲ ಎಂದೆಲ್ಲ ತಪ್ಪು ಮಾಹಿತಿ ಬರುತ್ತಲೇ ಇತ್ತು. ಹೀಗಾಗಿ ಸಮೀಕ್ಷೆಗೆ ಆರಂಭದಲ್ಲಿ ಸ್ವಲ್ಪ ತೊಡಕಾಯಿತು ಎಂದು ಸರ್ಕಾರ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read