ಬೆಂಗಳೂರು : ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾ, ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಬೇಕಾ..? ನೀವು ಏನು ಮಾಡಬೇಕು..? ಹೇಗೆ ದೂರು ನೀಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ@osd_cmkarnatakaʼಎಕ್ಸ್ʼ ಖಾತೆಗೆ ಟ್ಯಾ ಗ್ ಮಾಡಬಹುದಾಗಿದೆ.
ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಕುಂದು ಕೊರತೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ . ಕುಂದುಕೊರತೆ ಬಗ್ಗೆ ಈ ಹಿಂದೆ ಯಾವುದೇ ಕಚೇರಿ ಅಥವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಕಚೇರಿ ಸ್ವೀಕೃತಿ ಪತ್ರ ಲಗತ್ತಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸುವುದು.
ನಿಮ್ಮ ಸಮಸ್ಯೆಗೆ ಹೀಗೆ ಪರಿಹಾರ
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ನಿವಾಸಿಗಳು ಮೂಲಭೂತ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಯವರ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಗ್ರಾಮದ ಜನರಿಗೆ ಅಧಿಕೃತವಾಗಿ ನಿವೇಶನ ವಿತರಣೆಯಾಗದಿದ್ದರೂ ತಮ್ಮಿಷ್ಟಕ್ಕೆ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಜೊತೆಗೆ ನಿವೇಶನ ವಿತರಣೆಯ ಮಿತಿಯನ್ನು ಮೀರಿ 10ರಿಂದ 50 ಎಕರೆವರೆಗಿನ ಜಮೀನನ್ನು ಆಕ್ರಮಿಸಿಕೊಂಡು ಕೃಷಿಯನ್ನು ಮಾಡಿಕೊಂಡಿರುವುದು ಕಂಡುಬಂದಿರುತ್ತದೆ. ಅಧಿಕೃತವಾಗಿ ನಿವೇಶನ ವಿತರಣೆಯಾಗದೇ ಇರುವುದರಿಂದ ಯಾರಿಗೂ ಹಕ್ಕುಪತ್ರಗಳು ಲಭಿಸಿರುವುದಿಲ್ಲ.
ಗ್ರಾಮ ಪಂಚಾಯತ್ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಹೆಚ್ಚುವರಿ ಅಕ್ರಮಿತ ಜಮೀನನ್ನು ಬಿಟ್ಟುಕೊಡಲು ಬದ್ಧರಿರಬೇಕೆಂದು ತಿಳಿಸಿದಾಗ ನಿವಾಸಿಗಳು ಸಮ್ಮತಿಸಿರುವುದಿಲ್ಲ. ಅಕ್ರಮ ಜಮೀನನ್ನು ನಿವೇಶನ ವಿತರಣೆಯ ಮಾರ್ಗಸೂಚಿಗಳಡಿಯಲ್ಲಿ ನೀಡಲು ಅವಕಾಶವಿಲ್ಲದಿರುವುದರಿಂದ ಹಾಗೂ ನಿಯಮ 94 ಸಿ ಅಡಿಯಲ್ಲಿ ಮನೆಯ ಅಡಿ ಸ್ಥಳವನ್ನು ಮಂಜೂರು ಮಾಡುವ ಅವಕಾಶವಿಲ್ಲದಿರುವುದರಿಂದ ಗ್ರಾಮಸ್ಥರು ಅಗತ್ಯ ದಾಖಲೆಗಳಿಂದ ವಂಚಿತರಾಗಿದ್ದಾರೆ. ಉಳಿದಂತೆ, ಗ್ರಾಮದ ಮುಖ್ಯ ರಸ್ತೆಗಳು ಡಾಂಬರೀಕರಣಗೊಂಡಿದೆ. ಕುಡಿಯುವ ನೀರಿಗಾಗಿ ಟ್ಯಾಂಕ್ ಹಾಗೂ ಕೊಳವೆ ಬಾವಿ ಮತ್ತು ಪೈಪ್ಲೈನ್ ಅಳವಡಿಸಲಾಗಿದೆ ಎಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
— DIPR Karnataka (@KarnatakaVarthe) November 22, 2025
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ನಿವಾಸಿಗಳು ಮೂಲಭೂತ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಯವರ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ… pic.twitter.com/s0CtItDotQ
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
— DIPR Karnataka (@KarnatakaVarthe) November 22, 2025
ಬೆಂಗಳೂರಿನ ಜೆ.ಪಿ ನಗರದಲ್ಲಿರುವ ನಂಜುಂಡೇಶ್ವರ ಬಡಾವಣೆಯ ರಸ್ತೆಯು ಗುಂಡಿಗಳಿಂದ ಕೂಡಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದಾಗಿ ʼಎಕ್ಸ್ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗಕ್ಕೆ ದೂರು ನೀಡಿರುತ್ತಾರೆ. ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ… pic.twitter.com/rUW8LYrKt8
