ಜವಾಹರ ನವೋದಯ ವಿದ್ಯಾಲಯಗಳಲ್ಲಿ 2026-27ನೇ ಸಾಲಿಗೆ ಆಯ್ಕೆ ಪರೀಕ್ಷೆಯ ಮೂಲಕ 6ನೇ ತರಗತಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ಆನ್ಸೆನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-07-2025
ಸಾಮಾನ್ಯ ವಿಶೇಷ ಲಕ್ಷಣಗಳು
- ಪ್ರತಿ ಜಿಲ್ಲೆಯಲ್ಲಿ ಸಹ ಶಿಕ್ಷಣ ವಸತಿ ಶಾಲೆಗಳು,
- ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ.
- ಉಚಿತ ಶಿಕ್ಷಣ, ಆಹಾರ ಮತ್ತು ವಸತಿ ವ್ಯವಸ್ಥೆ.
- ವಲಸೆ ಯೋಜನೆಯ ಮೂಲಕ ವೈವಿಧ್ಯಮಯ ಸಾಂಸ್ಕೃತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ.
- ಎನ್.ಸಿ.ಸಿ., ಸೈಟ್ಸ್ & ಗೈಡ್ಸ್ ಮತ್ತು ಎನ್.ಎಸ್. ಎಸ್.
- ಅರ್ಹತೆ
- ಅಭ್ಯರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಆಯಾ ಜಿಲ್ಲೆಯ ವಿಶ್ವಾಸಾರ್ಹ ನಿವಾಸಿಗಳೇ ಆಗಿರಬೇಕು ಮತ್ತು 2025-26 ನೇ ಶೈಕ್ಷಣಿಕ ವರ್ಷದಲ್ಲಿ ಅದೇ ಜಿಲ್ಲೆಯ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
- ವಿದ್ಯಾರ್ಥಿಯು 3 ಮತ್ತು 4 ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪೂರ್ಣಾವಧಿ ಶಾಲಾ ಶಿಕ್ಷಣ ಪಡೆದು ತೇರ್ಗಡ ಹೊಂದಿರಬೇಕು. 01.05.2014 ರಿಂದ 31.07.2016 ರ ಮಧ್ಯೆ ಜನಿಸಿದವರಾಗಿರಬೇಕು (ಎರಡೂ ದಿನಗಳು ಸೇರಿ).
ನೋಂದಣಿ ಮತ್ತು ವಿವರಗಳಿಗಾಗಿ ಲಾಗಿನ್ ಮಾಡಿ https://navodava.gov.in
ಮೀಸಲಾತಿ
ಜಿಲ್ಲೆಯಲ್ಲಿ ಕನಿಷ್ಠ ಶೇ 75% ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ತುಂಬಲಾಗುವುದು.
ಸರ್ಕಾರದ ನಿಯಮದನ್ವಯ SC, ST, OBC ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. - ಕನಿಷ್ಠ 1/3 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.
You Might Also Like
TAGGED:ನವೋದಯ ವಿದ್ಯಾಲಯ