ವಾಹನ ಸವಾರರ ಗಮನಕ್ಕೆ : ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ

ಶಿವಮೊಗ್ಗ : ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಿಂದ ಬಾಪೂಜಿನಗರ-ಟ್ಯಾಂಕ್ ಮೊಹಲ್ಲಾ ಕಡೆಗೆ ಹೋಗುವ ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ, ಪ.ಪೂ.ಕಾಲೇಜು ಮತ್ತು ಪ್ರ.ದ.ಕಾಲೇಜು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಓಡಾಟ ಹಾಗೂ ಜಿಲ್ಲಾಡಳಿತದಿಂದ ನಡೆಯುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳ ಮೆರವಣಿಗೆ ನಡೆಯುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ರಸ್ತೆಯಲ್ಲಿನ ವಾಹನ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ರವರು ಅಧಿಸೂಚನೆ ಹೊರಡಿಸಿ ಕೆಳಕಂಡಂತೆ ಆದೇಶ ನೀಡಿರುತ್ತಾರೆ.

ವಾಹನಗಳ ನಿಲುಗಡೆ ನಿಷೇಧಿತ ಸ್ಥಳ (ನೋ ಪಾರ್ಕಿಂಗ್); ಬಿ.ಹೆಚ್.ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ (ಮೀನಾಕ್ಷಿಭವನದ ಎದುರುಗಡೆ) ಬಿ.ಹೆಚ್.ರಸ್ತೆಯ ಕಡೆಯಿಂದ ಬಲಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್ ವರೆಗೆ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ.

ವಾಹನಗಳ ನಿಲುಗಡೆ ಸ್ಥಳ (ಪಾರ್ಕಿಂಗ್): ಬಿ.ಹೆಚ್.ರಸ್ತೆಯಿಂದ ಬಾಪೂಜಿ ನಗರ- ಟ್ಯಾಂಕ್ ಮೊಹಲ್ಲ ಕಡೆಗೆ ಹೋಗುವ ರಸ್ತೆಯ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ಗೆ ಹೊಂದಿಕೊಂಡಂತೆ (ಮೀನಾಕ್ಷಿಭವನದ ಎದುರುಗಡೆ) ಬಿ.ಹೆಚ್.ರಸ್ತೆಯ ಕಡೆಯಿಂದ ಎಡಭಾಗದಲ್ಲಿ ಟಿ.ಜಿ.ನಾರಾಯಣ ಲೇಔಟ್ 2ನೇ ಕ್ರಾಸ್ವರೆಗೆ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೇಟ್ವರೆಗೆ) ದ್ವಿಚಕ್ರ ಹಾಗೂ ಕಾರು ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿರುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read