ಬೆಂಗಳೂರು: ಜುಲೈ 19 ರಂದು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯು ಸೇನೆ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಜನರಲ್ ರೀ ಸೆಟ್ಲ್ಮಂಟ್ ನಿರ್ದೇಶನಾಯಲವು ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 7ರಿಂದಲೇ ನೇರ ನೋಂದಣಿ ಆರಂಭವಾಗಲಿದೆ.
ಮೇಳದಲ್ಲಿ ಭಾಗಿಯಾಗಲು ಬಯಸುವವರು ಬಯೋ ಡೆಟಾದ ಐದು ಪ್ರತಿಗಳೊಂದಿಗೆ ಅಂದಿನ ಸಂದರ್ಶನಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಈ ಸಂದರ್ಶನ ಇರಲಿದೆ. ಈ ಕುರಿತಾದ ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಜನರಲ್ ಸೆಟ್ಲ್ಮೆಂಟ್ ನಿರ್ದೇಶನಾಲಯ, ಪಶ್ಚಿಮ ಬ್ಲಾಕ್ 4, ಆರ್ಕೆ ಪುರಂ, ದೆಹಲಿ110066 ಗೆ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 011 20862542 ಸಂಪರ್ಕಿಸಬಹುದು.
https://twitter.com/Prodef_blr/status/1810149994575585449?ref_src=twsrc%5Etfw%7Ctwcamp%5Etweetembed%7Ctwterm%5E1810149994575585449%7Ctwgr%5E808b16d46cdbe20632937651ecfe6881a5138549%7Ctwcon%5Es1_&ref_url=https%3A%2F%2Fkannadadunia.com%2Flive-news%2Fattention-job-seekers-ju-job-fair-on-19th%2F