ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೆಪ್ಟೆಂಬರ್ 7ರಂದು ಭಾನುವಾರ ಚಂದ್ರಗ್ರಹಣ ಇರುವುದರಿಂದ ನಿತ್ಯದ ಸೇವೆ, ದರ್ಶನ ಸೇವಾ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ರಾತ್ರಿಯ ಮಹಾಪೂಜೆ ಸಂಜೆ 5 ಗಂಟೆಗೆ ನೆರವೇರಿಸಲಾಗುವುದು. ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ.
ಸಾಯಂಕಾಲದ ಆಶ್ಲೇಷ ಬಲಿ ಸೇವೆಯೂ ಇರುವುದಿಲ್ಲ. ಶನಿವಾರ ಆರಂಭವಾದ ಸರ್ಪ ಸಂಸ್ಕಾರ ಸೇವೆ ಭಾನುವಾರ ಕೊನೆಯಾಗಲಿದೆ. ಭಾನುವಾರ ಸೇವೆ ಆರಂಭವಾಗುವುದಿಲ್ಲ. ಸಂಜೆ 5ರಿಂದ ದೇವರ ದರ್ಶನ ಇರುವುದಿಲ್ಲ. ಸೆ. 8ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.