BREAKING : ಬೆಂಗಳೂರಿನ ‘ವಾಹನ ಸವಾರ’ರೇ ಗಮನಿಸಿ : 45 ದಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ.!

ಬೆಂಗಳೂರು : ಓ ಆರ್ ಆರ್ ರಸ್ತೆಯ 9ನೇ ಮೈನ್ ಜಂಕ್ಷನ್ ನಿಂದ 5ನೇ ಮೈನ್ ವರೆಗಿನ ಸರ್ವಿಸ್ ರಸ್ತೆಯನ್ನು ಮೆಟ್ರೋ ಸ್ಟೇಷನ್ ಕಾಮಗಾರಿಗಾಗಿ ಮುಂದಿನ 45 ದಿನಗಳ ಕಾಲ ಉಪಯೋಗಿಸಿದ್ದು ಓ ಆರ್ ಆರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿದ್ದು ಓ ಆರ್ ಆರ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗದಲ್ಲಿ ಚಲಿಸಲು ಕೋರಿದೆ.

ಹೆಚ್.ಎಸ್.ಆರ್. ಲೇಔಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಹೊರವರ್ತುಲ ರಸ್ತೆ 9ನೇಮುಖ್ಯರಸ್ತೆ ಜಂಕ್ಷನ್ ನಿಂದ 5ನೇಮುಖ್ಯ ರಸ್ತೆ ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ಮೇಟ್ರೋ ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ದಿ. 06.10.2025 ರಿಂದ 45 ದಿನಗಳ ಕಾಲ ಕಾಮಗಾರಿ ನಡೆಯುವುದರಿಂದ, 9ನೇ ಮುಖ್ಯ ರಸ್ತೆ ಜಂಕ್ಷನ್ ನಿಂದ 5ನೇ ಮುಖ್ಯ ರಸ್ತೆ ಜಂಕ್ಷನ್ ವರೆಗಿನ ಹೊರವರ್ತುಲ ರಸ್ತೆ ಸರ್ವಿಸ್ ರಸ್ತೆಯನ್ನು ಕಾಮಗಾರಿಗಾಗಿ ಉಪಯೋಗಿಸಿಕೊಳ್ಳಲಿದ್ದು, ಕಾಮಗಾರಿ ಮುಗಿಯುವ ವರೆಗೆ ಇಬ್ಬಲೂರ್ ಕಡೆಯಿಂದ ಬಂದು ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು 14ನೇ ಮುಖ್ಯ ರಸ್ತೆ ಫೈಓವರ್ ಮೂಲಕ ಮುಖ್ಯರಸ್ತೆಯಲ್ಲಿಯೇ 5ನೇ ಮುಖ್ಯರಸ್ತೆ ಜಂಕ್ಷನ್ ಗೆ ಸಾಗಿ ಅಥವಾ ಇತರ ಹೆಚ್.ಎಸ್.ಆರ್. ಲೇಔಟ್ ಒಳಭಾಗದ ರಸ್ತೆಯಗಳ ಮೂಲಕ ಸಾಗಿ ಸಿಲ್ಕ್ ಬೋರ್ಡ್ ಹಾಗು ಹೊಸೂರು ಮುಖ್ಯರಸ್ತೆ ರಸ್ತೆ ಸಂಚರಿಸುವುದು ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read