ಬೆಂಗಳೂರು : ಹಲ್ಲೆ ಯತ್ನ, ಬೆದರಿಕೆ ಆರೋಪದ ಮೇರೆಗೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ ಪಿ ಕಚೇರಿಗೆ ಆಗಮಿಸಿದ ನಟ ಪ್ರಥಮ್ ದೂರು ದಾಖಲಿಸಿದ್ದಾರೆ. ಬೇಕರಿ ರಘು & ಗ್ಯಾಂಗ್ ವಿರುದ್ಧಅವರು ದೂರು ನೀಡಿದ್ದಾರೆ.
ಕಳೆದ ಜುಲೈ 22 ರಂದು ದೊಡ್ಡಬಳ್ಳಾಪುರದಲ್ಲಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಬೇಕರಿ ರಘು ಮತ್ತು ಆತನ ಗ್ಯಾಂಗ್ ನಟ ಪ್ರಥಮ್ ಗೆ ಡ್ರಾಗರ್ ನಿಂದ ಹಲ್ಲೆಗೆ ಯತ್ನಿಸಿದ್ದು ಕೊಲೆ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ಇದೀಗ ಬೆಂಗಳೂರು ಗ್ರಾಮಾಂತರ ಎಸ್ ಪಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ
ರಮ್ಯಾ ಪರ ಪ್ರಥಮ್ ಬ್ಯಾಟಿಂಗ್
ನಾನು ರಮ್ಯಾ ಮೇಡಂ ಘನತೆಗೆ ಬೆಂಬಲ ನೀಡುತ್ತೇನೆ. ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ. ಈಗಲೂ ನಾವು ನಟಿ ರಮ್ಯಾ ಅವರ ಆತ್ಮಗೌರವದ ಪರ ನಿಲ್ಲದೆ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನು ಭಯಮುಕ್ತಗೊಳಿಸೋಣ ಎಂದು ಕರೆ ನೀಡಿದ್ದಾರೆ.ಇಷ್ಟೆಲ್ಲ ಆದರೂ ಜಾಣಕಿವುಡರಾಗಿರುವ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರು ಕಾಲ ಬಾಳುವ ಆಯಸ್ಸು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಕುಟುಂಬದ ಪರ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗುತ್ತಿದ್ದಾರೆ. ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಇದರ ವಿರುದ್ಧ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ ಕಂಪನಿಗೆ ಡುಬಾಕ್ ಕಂಪನಿ
ಡಿ ಕಂಪನಿಗೆ ಡುಬಾಕ್ ಕಂಪನಿ ಎಂದು ನಟ ಪ್ರಥಮ್ ಹೇಳಿದ್ದಾರೆ. ದರ್ಶನ್ ಫ್ಯಾನ್ಸ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಪ್ಪು ಪಪ್ಪು ತಿನ್ನೋಕೆ ಹೋಗ್ರಲೋ ಎಂದು ಪ್ರಥಮ್ ಕಿಡಿಕಾರಿದ್ದಾರೆ.ಡಿ ಕಂಪನಿ ಅಂತ ಹೆಸರಿಟ್ಟುಕೊಂಡಿರುವ ನಿಮ್ಮ ವಿಷಯ ಟಾಯ್ಲೆಟ್ ನಲ್ಲಿ ನಿಂತು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನಾಳೆ ದೊಡ್ಡದಾಗಿ ಅಗುತ್ತೆ!
— Olle Hudga Pratham (@OPratham) July 28, 2025
ತುಂಬಾ ದೊಡ್ಡ ನಿರ್ಧಾರ!
ನೀವೆಲ್ಲರೂ ನೀವು ಇಷ್ಟ ಪಡೋ ನಟರನ್ನ ಬೀದಿಗೆ ನಿಲ್ಲಿಸ್ತಾ ಇದೀರಾ!
ನಾಳೆ ನೋಡ್ತೀರಿ ಏನಾಗುತ್ತೆ ಅಂತ!
D company,fans pagesನಿಮ್ಗೇನೂ ಪ್ರಾಬ್ಲಮ್ ಇರಲ್ಲ ಆರಾಮಾಗಿರಿ!
ನಾಳೆಏನೋ ಆಗುತ್ತೆ ಕಾಯ್ತಿರಿ(paid fansಗಳ)
ನಿಮ್ಮ ಹೀರೋನ ನೀವೇ ಬೀದಿಗೆ ತರ್ತಾ ಇದೀರಾ!wait till tomorrow🙏