ಎಟಿಎಂ ಕಾರ್ಡ್ ಮಷಿನ್‌ ನಲ್ಲಿ ಸಿಕ್ಕಿಹಾಕಿಕೊಂಡ ವೇಳೆ ಯಾವುದೇ ಕಾರಣಕ್ಕೂ ಮಾಡಬೇಡಿ ಈ ತಪ್ಪು

ಮೊದಲು ನಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಎಟಿಎಂ ಅವಲಂಬಿಸಬೇಕಾಗಿತ್ತು. ಈಗ ಎಟಿಎಂನಿಂದ ಹಣ ತೆಗೆಯುವ ಕೆಲಸ ಸಾಕಷ್ಟು ಕಡಿಮೆಯಾಗಿದೆ. ಜನರು ಎಟಿಎಂಗಳ ಬದಲಿಗೆ ಯುಪಿಐ ಬಳಸುತ್ತಿದ್ದಾರೆ. ಆದರೆ ಅನೇಕ ಬಾರಿ ನಮಗೆ ನಗದು ಅಗತ್ಯವಿದ್ದಾಗ ಎಟಿಎಂಗಳ ಕಡೆಗೆ ಹೋಗುತ್ತೇವೆ. ಈ ವೇಳೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಟಿಎಂಗಳಲ್ಲಿಯೂ ಹಲವು ರೀತಿಯ ವಂಚನೆಗಳು ನಡೆಯುತ್ತಿದ್ದು ಇದರ ಬಗ್ಗೆ ಎಚ್ಚರವಹಿಸಬೇಕಿದೆ.

ಎಟಿಎಂ ನಲ್ಲಿ ಹಣ ವಿಥ್ ಡ್ರಾ ಮಾಡುವಾಗ ಕಾರ್ಡ್ ಸಿಕ್ಕಿಹಾಕಿಕೊಳ್ಳುತ್ತದೆ. ಕೆಲವೊಮ್ಮೆ ಇಂತಹ ದೂರುಗಳು ವರದಿಯಾಗಿವೆ. ಅನೇಕ ಬಾರಿ ಕಾರ್ಡ್ ಯಂತ್ರದಲ್ಲಿ ಸಿಲುಕಿಕೊಂಡರೆ ಗಾಬರಿಯಾಗಿ ನಾವು ಅಲ್ಲಿ ಬರೆದಿರುವ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡುತ್ತೇವೆ. ಆದರೆ ಇಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಯಾಕಂದ್ರೆ ಯಂತ್ರದಲ್ಲಿ ಸಿಕ್ಕಿಹಾಕಿಕೊಳ್ಳುವುದು ನಿಮ್ಮ ಕಾರ್ಡ್ ಅಲ್ಲ ಸಿಕ್ಕಿಹಾಕಿಕೊಳ್ಳುವುದು ವಂಚಕರಿಗೆ.

ವಂಚಕರು ಎಟಿಎಂ ಕಾರ್ಡ್ ಹಾಕುವ ಜಾಗದಲ್ಲಿ ಮತ್ತೊಂದು ಯಂತ್ರವನ್ನು ಗೊತ್ತಿಲ್ಲದಂತೆ ಇಟ್ಟಿರುತ್ತಾರೆ. ಅಲ್ಲಿ ತಮ್ಮ ಸಂಖ್ಯೆಯನ್ನು ಕಸ್ಟಮರ್ ಕೇರ್ ಸಂಖ್ಯೆ ಎಂದು ಅಂಟಿಸಿ ಹೋಗಿರುತ್ತಾರೆ. ನಂತರ ನೀವು ಆ ನಂಬರ್ ಗೆ ಕರೆ ಮಾಡಿದಾಗ, ನೀವು ಅವರ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ಕರೆ ಮಾಡುವ ಮೊದಲು ಅಲ್ಲಿ ಸಂಖ್ಯೆಯನ್ನು ಯಾವ ರೀತಿಯಲ್ಲಿ ಬರೆಯಲಾಗಿದೆ ಎಂಬುದನ್ನು ಪರಿಶೀಲಿಸಿ. ಯಾವುದೇ ಸಾಮಾನ್ಯ ಕಾಗದದ ಮೇಲೆ ಸಂಖ್ಯೆಯನ್ನು ಬರೆದು ಅಂಟಿಸಿದರೆ ಅದಕ್ಕೆ ಕರೆ ಮಾಡಬೇಡಿ.

ಇದರೊಂದಿಗೆ ಎಟಿಎಂನಿಂದ ಹಣ ಡ್ರಾ ಮಾಡುವ ಮೊದಲು ಮತ್ತು ಎಟಿಎಂ ಒಳಗೆ ಹೋದ ತಕ್ಷಣ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸುವುದು. ಎಟಿಎಂ ಕೋಣೆ ಸುತ್ತಲೂ ನೋಡಿ ಮತ್ತು ಯಾವುದೇ ಹಿಡನ್ ಕ್ಯಾಮೆರಾಗಳಿವೆಯೇ ಎಂದು ಪರಿಶೀಲಿಸಿ. ನೀವು ಎಟಿಎಂ ಕಾರ್ಡ್ ಸ್ಲಾಟ್ ಅನ್ನು ಸಹ ಪರಿಶೀಲಿಸಬೇಕು. ಅನೇಕ ಬಾರಿ ದುಷ್ಕರ್ಮಿಗಳು ಕಾರ್ಡ್ ಸ್ಲಾಟ್‌ಗಳ ಸುತ್ತಲೂ ಕಾರ್ಡ್ ರೀಡರ್ ಚಿಪ್‌ಗಳನ್ನು ಸ್ಥಾಪಿಸುತ್ತಾರೆ. ಇದು ಎಟಿಎಂ ಕಾರ್ಡ್ ಡೇಟಾ ಮತ್ತು ಪಿನ್ ಕೋಡ್ ಮಾಹಿತಿಯನ್ನು ಕದಿಯಬಹುದು.

ನಿಮ್ಮ ಎಟಿಎಂ ಪಿನ್ ಯಾರಿಗೂ ಗೊತ್ತಾಗದಂತೆ ಕಾಪಾಡಿಕೊಳ್ಳಿ. ನೀವು ಹಣ ಡ್ರಾ ಮಾಡಲು ಎಟಿಎಂ ಒಳಗೆ ಹೋದಾಗ ಅಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದರೆ ಅವರನ್ನು ಹೊರಗೆ ಹೋಗುವಂತೆ ತಿಳಿಸಿ ಅಥವಾ ಅವರಿಗೆ ಕಾಣದಂತೆ ನಿಮ್ಮ ಎಟಿಎಂ ಪಿನ್ ನಂಬರ್ ನಮೂದಿಸಿ. ಪಿನ್ ನಮೂದಿಸುವಾಗ, ಎಟಿಎಂ ಕೀಬೋರ್ಡ್ ಅನ್ನು ನಿಮ್ಮ ಕೈಯಿಂದ ಮುಚ್ಚಿ ಮತ್ತು ಸಾಧ್ಯವಾದಷ್ಟು ಯಂತ್ರದ ಹತ್ತಿರ ನಿಂತುಕೊಳ್ಳಿ. ಇದರಿಂದ ಯಾರೂ ನಿಮ್ಮ ಪಿನ್ ಅನ್ನು ನೋಡುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read