ಎಟಿಎಂನಲ್ಲಿ ದರೋಡೆ: ಸಿನಿಮೀಯ ರೀತಿಯಲ್ಲಿ ಕಳ್ಳರು ಅರೆಸ್ಟ್

ಬಾಗಲಕೋಟೆ: ಆಂಧ್ರಪ್ರದೇಶದ ಅನಂತಪುರದ ಎಟಿಎಂನಲ್ಲಿ ಹಣ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಸಿನಿಮಾ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಬಂಧಿಸಿದ್ದಾರೆ.

ಅನಂತಪುರ ಎಟಿಎಂನಲ್ಲಿ ಹಣ ಕದ್ದು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ವಿಜಯಪುರ ಕಡೆಗೆ ಕಾರ್ ನಲ್ಲಿ ಕಳ್ಳರು ಪರಾರಿಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಹುನಗುಂದ ಠಾಣೆ ಪೊಲೀಸರು ಸಂಗಮ ಕ್ರಾಸ್ ಬಳಿ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.

ಇದೇ ರಸ್ತೆಯಲ್ಲಿ ಆಗಮಿಸಿದ ಕಳ್ಳರು ಪೊಲೀಸರನ್ನು ಕಂಡು ಮರಳಿ ಹುನಗುಂದ ಕಡೆಗೆ ಕಾರ್ ತಿರುಗಿಸಿದ್ದಾರೆ. ಇದನ್ನು ಬೆನ್ನು ಗಮನಿಸಿದ ಪೊಲೀಸರ ತಂಡ ಆ ಕಾರ ಬೆನ್ನಟ್ಟಿದ್ದು, ತಮ್ಮ ವಾಹನವನ್ನು ಕಳ್ಳರ ಕಾರ್ ಗೆ ಡಿಕ್ಕಿ ಹೊಡೆಸಿದ್ದಾರೆ. ಕಾರ್ ಹಿಂದಿನ ಟೈಯರ್ ಬ್ಲಾಸ್ಟ್ ಆಗಿ ಕಾರ್ ನಿಂತಿದೆ. ಈ ವೇಳೆ ಕಳ್ಳರು ಹೊಲದಲ್ಲಿ ಓಡಲಾರಂಭಿಸಿದ್ದು, ಅವರನ್ನು ಹಿಂಬಾಲಿಸಿದ ಪೊಲೀಸರು ಬೆನ್ನಟ್ಟಿ ಹಿಡಿದು ಬಂಧಿಸಿ ಹುನಗುಂದ ಠಾಣೆಗೆ ಕರೆತಂದಿದ್ದಾರೆ. ಅನಂತಪುರ ಠಾಣೆಯ ಪೊಲೀಸರು ಆಗಮಿಸಿ ಕಳ್ಳರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read