ಕೇವಲ 9 ನಿಮಿಷದಲ್ಲಿ ಎಟಿಎಂನಿಂದ 14 ಲಕ್ಷ ರೂ. ದೋಚಿ ಪರಾರಿ

ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಎಟಿಎಂ ಒಂದರಲ್ಲಿ ಭಾನುವಾರ ಬೆಳಗಿನ ಜಾವ ಕೇವಲ 9 ನಿಮಿಷದಲ್ಲಿ 14 ಲಕ್ಷ ರೂ. ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಅಫಜಲಪುರ ಪಟ್ಟಣದ ಕಾಳಿಕಾದೇವಿ ದೇವಾಲಯ ಪಕ್ಕದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಒಡೆದು 14.86 ಲಕ್ಷ ರೂ. ದೋಚಲಾಗಿದೆ. ಭಾನುವಾರ ಬೆಳಗಿನ ಜಾವ 3.24ಕ್ಕೆ ಬೋಲೇರೋ ವಾಹನದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಎಟಿಎಂ ಒಳಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮೆರಾ ಗೆ ಸ್ಪ್ರೇ ಮಾಡಿದ್ದಾರೆ. ದೃಶ್ಯಗಳು ರೆಕಾರ್ಡ್ ಆಗದಂತೆ ಮಾಡಿ ಗ್ಯಾಸ್ ಕಟರ್ ಸಹಾಯದಿಂದ ಎಟಿಎಂ ಯಂತ್ರದಲ್ಲಿ ಹಣ ಇರುವ ಭಾಗವನ್ನು ಕತ್ತರಿಸಿ 3.33ಕ್ಕೆ ಬಾಕ್ಸ್ ಸಮೇತ ಪರಾರಿಯಾಗಿದ್ದಾರೆ. ಕೇವಲ 9 ನಿಮಿಷಗಳಲ್ಲಿ 14.86 ಲಕ್ಷ ರೂ. ದೋಚಲಾಗಿದೆ.

ಮಾಹಿತಿ ತಿಳಿದ ಎಸ್.ಪಿ. ಇಶಾ ಪಂತ್, ಎ.ಎಸ್.ಪಿ. ಶ್ರೀನಿಧಿ,ಡಿ.ವೈ.ಎಸ್.ಪಿ. ಬಿ.ಆರ್.  ಗೋಪಿ, ಪಿಎಸ್ಐ ಭೀಮರಾಯ ಬಂಕಲಿ ಅವರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಕೇಸು ದಾಖಲಿಸಿದ್ದಾರೆ. ಬ್ಯಾಂಕ್ ನ ಮತ್ತೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನ ದೃಶ್ಯ ಸೆರೆಯಾಗಿದೆ. ಎಟಿಎಂ ಭದ್ರತೆಗೆ ಬ್ಯಾಂಕ್ ಆಡಳಿತ ಮಂಡಳಿ ಭದ್ರತಾ ಸಿಬ್ಬಂದಿ ನಿಯೋಜಿಸಿಲ್ಲ. ಇದರಿಂದ ಕಳ್ಳತನ ನಡೆದಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read