ಮಹಾಕುಂಭದಲ್ಲಿ ‘ದುಬೈ ಶೇಖ್’ ವೇಷ; ರೀಲ್ಸ್‌ ಮಾಡುತ್ತಿದ್ದವನಿಗೆ ಗೂಸಾ | Video

2025ರ ಮಹಾಕುಂಭ ಮೇಳದಲ್ಲಿ ಒಬ್ಬ ವ್ಯಕ್ತಿ ದುಬೈ ಶೇಖ್‌ ವೇಷ ಧರಿಸಿಕೊಂಡು ರೀಲ್ಸ್ ಮಾಡುತ್ತಿದ್ದ ವೇಳೆ ಜನರು ಅವನ ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಈ ವ್ಯಕ್ತಿಯನ್ನು ‘ಶೇಖ್ ಪ್ರೇಮಾನಂದ’ ಎಂದು ಪರಿಚಯಿಸಲಾಗಿತ್ತು.

ಆದರೆ, ಈ ಹೆಸರು ಜನರಲ್ಲಿ ಸಂಶಯ ಹುಟ್ಟುಹಾಕಿದ್ದು, ಅವನನ್ನು ಪ್ರಶ್ನಿಸಲು ಕಾರಣವಾಯಿತು. ಅವನ ಕೃತ್ಯವನ್ನು ಅವಮಾನಕರವೆಂದು ಪರಿಗಣಿಸಿದ ಕೋಪಗೊಂಡ ಜನರು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಸಮಯದಲ್ಲಿ ಸನ್ಯಾಸಿಗಳಿಂದ ಎದುರಿಸಲ್ಪಟ್ಟ ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಇದು ಕೇವಲ ತಮಾಷೆ ಮಾಡಲು ಮಾಡಿದ್ದೇನೆ ಎಂದು ಹೇಳಿದ್ದಾನೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕೂಡ ರೀಲ್ ಕ್ರಿಯೇಟರ್‌ ನನ್ನು ಖಂಡಿಸಿದ್ದಾರೆ. ವಿಡಿಯೋದಲ್ಲಿ, ಆ ವ್ಯಕ್ತಿ ಪ್ರಯಾಗರಾಜ್‌ ನಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ನಡೆಯುತ್ತಿರುವುದು ಕಂಡುಬಂದಿದೆ. ಅವರು ಅವನನ್ನು ಪರಿಚಯಿಸುವಾಗ ಅವನಿಗೆ ಕೃತಕ ಹೆಸರನ್ನು ನೀಡಿದ್ದಾರೆ.

ಉದ್ದನೆಯ ಬಿಳಿ ನಿಲುವಂಗಿ ಧರಿಸಿ, ಆತ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಹೋಗಿದ್ದಾನೆ. ಅವನನ್ನು ‘ಶೇಖ್ ಪ್ರೇಮಾನಂದ’ ಎಂಬ ಹೆಸರಿನಲ್ಲಿ ಪರಿಚಯಿಸಲಾಗಿದ್ದು, ಆ ಹೆಸರು ಜನರಲ್ಲಿ ಸಂಶಯ ಹುಟ್ಟುಹಾಕಿ ಅವನನ್ನು ಪ್ರಶ್ನಿಸಲು ಕಾರಣವಾಯಿತು.

ಆತ ರಾಜಸ್ಥಾನದಿಂದ ಬಂದವನು ಮತ್ತು ರೀಲ್ಸ್‌ ಗಾಗಿ ತನ್ನ ನಕಲಿ ಗುರುತನ್ನು ಸೃಷ್ಟಿಸಿದನೆಂಬುದು ತಿಳಿದುಬಂತು. ಆದರೆ, ಪವಿತ್ರ ಸ್ಥಳದಲ್ಲಿ ತನ್ನ ತಮಾಷೆಗಾಗಿ ಧರ್ಮಗಳನ್ನು ಅವಮಾನಿಸಿದ್ದಕ್ಕಾಗಿ ಅವನ ಮೇಲೆ ಹಲ್ಲೆ ನಡೆಸಲಾಗಿದೆ.

ಸಂಗಮ ನಗರದಲ್ಲಿ ನಡೆಯುವ ಈ ಭವ್ಯ ಕಾರ್ಯಕ್ರಮಕ್ಕೆ ಪ್ರಪಂಚದಾದ್ಯಂತದ ಜನರು ತಮ್ಮ ಧರ್ಮವನ್ನು ಲೆಕ್ಕಿಸದೆ ಬರುತ್ತಿರುವಾಗ, ಅವನ ನಕಲಿ ಗುರುತು ಮತ್ತು ತಮಾಷೆ ಮಾಡುವ ಸ್ಟಂಟ್ ಜನರನ್ನು ಕೆರಳಿಸಿದೆ.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಆ ವ್ಯಕ್ತಿಯ ಮೇಲೆ ಮಹಾಕುಂಭದಲ್ಲಿ ಹಲ್ಲೆ ನಡೆಸಿದ್ದು ಅವನ ಮುಸ್ಲಿಂ ಗುರುತು ಮತ್ತು ವೇಷದ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಮಹಾಕುಂಭದಲ್ಲಿ ಜನರು ಅವನ ಮೇಲೆ ಹಲ್ಲೆ ನಡೆಸಿದ್ದು ಅವನ ತಮಾಷೆ ಮತ್ತು ರೀಲ್ ಸ್ಟಂಟ್‌ಗಳ ಕಾರಣ ಎಂದು ತಿಳಿದುಬಂದಿದೆ.

ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಬಹುತೇಕರು ಮಹಾಕುಂಭದಲ್ಲಿ ಜನರು ಅವನಿಗೆ ಮಾಡಿದ್ದನ್ನು ಸರಿ ಎಂದಿದ್ದಾರೆ. ಅವನನ್ನು ತರಾಟೆಗೆ ತೆಗೆದುಕೊಂಡು, “ಇದು ಕುಂಭ, ಇದು ಫ್ಯಾನ್ಸಿ ಡ್ರೆಸ್ ಶೋ ಅಲ್ಲ” ಎಂದು ಬರೆದಿದ್ದಾರೆ. “ಸನ್ಯಾಸಿಗಳು ಸರಿಯಾಗಿ ಮಾಡಿದ್ದಾರೆ. ಅವನು ತನ್ನನ್ನು ಶೇಖ್ ಪ್ರೇಮಾನಂದ ಎಂದು ಕರೆದುಕೊಂಡಿದ್ದು…… ಇದು ಫ್ಯಾನ್ಸಿ ಡ್ರೆಸ್ ಶೋ ಅಲ್ಲ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮಹಾಕುಂಭವು ಜನವರಿ 13 ರಂದು ಪ್ರಾರಂಭವಾಗಿ ಮಹಾಶಿವರಾತ್ರಿ (ಫೆಬ್ರವರಿ 26) ವರೆಗೆ ನಡೆಯಲಿದೆ. ಯುನೆಸ್ಕೋ ಇದನ್ನು ಅತಿ ದೊಡ್ಡ ಶಾಂತಿಯುತ ಧಾರ್ಮಿಕ ಸಭೆ ಎಂದು ಪಟ್ಟಿ ಮಾಡಿದೆ. ಕೋಟ್ಯಾಂತರ ಭಕ್ತರು ತೀರ್ಥ ಸ್ನಾನ ಮಾಡಲು ಸಂಗಮದಲ್ಲಿ ಸೇರುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read