ಜ್ಯೋತಿಷ್ಯ: ಮಹಿಳೆಯರ ಈ ಭಾಗದಲ್ಲಿ ತುರಿಕೆ ಕಂಡುಬಂದರೆ ಮಗುವಿಗೆ ಅಪಾಯ…!

ದೇಹದಲ್ಲಿ ತುರಿಕೆ ಕಂಡುಬರುವುದು ಒಂದು ಸಾಮಾನ್ಯ ವಿಚಾರ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ತುರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ದೇಹದ ಕೆಲವು ಭಾಗಗಳಲ್ಲಿ ತುರಿಕೆ ಕಂಡುಬಂದರೆ ಅದು ಕೆಲವು ಶುಭ, ಅಶುಭ ಸೂಚನೆಗಳಂತೆ. ಹಾಗಾದ್ರೆ ದೇಹದ ಯಾವ ಭಾಗದಲ್ಲಿ ತುರಿಕೆ ಕಂಡುಬಂದರೆ ಶುಭ, ಅಶುಭ ಎಂಬುದನ್ನು ತಿಳಿಯಿರಿ.

ನಿಮ್ಮ ಬಲಗೈಯಲ್ಲಿ ತುರಿಕೆ ಕಂಡುಬಂದರೆ ನಿಮಗೆ ಶೀಘ್ರದಲ್ಲಿಯೇ ಹಣ ಬರಲಿದೆ ಎಂಬ ಸೂಚನೆಯಂತೆ. ಉದ್ಯೋಗದಲ್ಲಿ ನಿಮ್ಮ ಸಂಬಳ ಹೆಚ್ಚಾಗಲಿದೆ ಎಂಬ ಸೂಚನೆಯಂತೆ.

ಹಾಗೇ ನಿಮ್ಮ ಎಡಗೈಯಲ್ಲಿ ತುರಿಕೆ ಕಂಡುಬಂದರೆ ನಿಮ್ಮ ಖರ್ಚು ಹೆಚ್ಚಾಗುತ್ತದೆ ಎಂಬ ಸಂಕೇತವಂತೆ. ನೀವು ಎಲ್ಲಿಂದಾದರೂ ಹಣದ ನಷ್ಟವನ್ನು ಅನುಭವಿಸುತ್ತೀರಿ ಎಂಬ ಸೂಚನೆಯನ್ನು ಇದು ನೀಡುತ್ತದೆಯಂತೆ.

ನಿಮ್ಮ ಕಣ್ಣಿನ ಸುತ್ತಲಿನ ಪ್ರದೇಶದಲ್ಲಿ ತುರಿಕೆ ಕಂಡುಬಂದರೆ ನಿಮಗೆ ಆರ್ಥಿಕ ಲಾಭವಾಗಲಿದೆ ಎಂಬುದನ್ನು ತಿಳಿಸುತ್ತದೆಯಂತೆ. ಬಾಕಿ ಇರುವ ನಿಮ್ಮ ಹಣ ಹಿಂತಿರುಗಿ ಬರುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಮಹಿಳೆಯರಿಗೆ ಎದೆಯ ಭಾಗದಲ್ಲಿ ತುರಿಕೆ ಕಂಡುಬಂದರೆ ನಿಮ್ಮ ಮಗುವಿಗೆ ತೊಂದರೆಯಾಗಲಿದೆ ಎಂಬುದನ್ನು ತಿಳಿಸುತ್ತದೆಯಂತೆ. ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗಬಹುದಂತೆ.

ತುಟಿಗಳಲ್ಲಿ ತುರಿಕೆ ಕಂಡುಬಂದರೆ ನೀವು ರುಚಿಕರವಾದ ಆಹಾರವನ್ನು ಸೇವಿಸುತ್ತೀರಿ ಎಂಬುದನ್ನು ತಿಳಿಸುತ್ತದೆ. ಹಾಗೇ ನಿಮಗೆ ಸಿಹಿ ಊಟ ಸಿಗಬಹುದು ಎನ್ನಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read