ಕಚೇರಿ, ಮನೆ, ಅಂಗಡಿ ಸೇರಿದಂತೆ ಎಲ್ಲ ಸ್ಥಳಗಳಲ್ಲೂ ಈಗ ಹವಾ ನಿಯಂತ್ರಕವನ್ನು ನಾವು ನೋಡಬಹುದು. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ಕಾಲಗಳಲ್ಲಿಯೂ ಎ.ಸಿ. ಬಳಸುವ ಮಂದಿ ನಮ್ಮಲ್ಲಿದ್ದಾರೆ. ಎ.ಸಿ. ಬಳಕೆ ಈಗ ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ನೆಮ್ಮದಿ ನೀಡುವ ಈ ಎ.ಸಿ. ಶನಿಯ ಕಾಟಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಹೌದು, ಶನಿ ಕಾರ್ಮಿಕರ ಗ್ರಹ. ಬೆವರಿಳಿಸಿ ದುಡಿಯುವವರಿಗೆ ಶನಿ ಕೃಪೆ ತೋರುತ್ತಾನೆ ಎಂಬ ನಂಬಿಕೆ ಇದೆ. ವಿದ್ವಾಂಸರ ಪ್ರಕಾರ ದಿನವಿಡಿ ದುಡಿಯುವ, ಬೆವರಿಳಿಸಿ ಕೆಲಸ ಮಾಡುವ ಕಾರ್ಮಿಕರಿಗೆ ದಾನ ಮಾಡಿದ್ರೆ ಶನಿ ಸಂತೋಷಗೊಳ್ತಾನಂತೆ. ಕಾರ್ಮಿಕರಿಗೆ ಕಪ್ಪು ಬಟ್ಟೆ, ಚಪ್ಪಲಿ, ಛತ್ರಿಯನ್ನು ದಾನ ಮಾಡಬೇಕಂತೆ.
ಆದ್ರೆ ಕೆಲಸ ಮಾಡುವವರಿಗೆಲ್ಲ ಶನಿ ಕೃಪೆ ತೋರುವುದಿಲ್ಲ. ಕೆಲವೊಂದು ಕೆಲಸ ಶನಿಯ ಮುನಿಸಿಗೆ ಕಾರಣವಾಗುತ್ತದೆ. ಯಾವ ವ್ಯಕ್ತಿ ದೈಹಿಕ ಕೆಲಸ ಮಾಡದೆ ಎ.ಸಿ. ಕೆಳಗೆ ಕುಳಿತು ಕೆಲಸ ಮಾಡ್ತಾನೋ ಆತ ಶನಿಯ ಕೋಪಕ್ಕೆ ಕಾರಣವಾಗುತ್ತಾನೆ. ಎಂದೂ ಬಡವರಿಗೆ ಸತಾಯಿಸಬೇಡಿ. ಹಾಗೆ ಅವರ ಹಕ್ಕನ್ನು ಕಸಿದುಕೊಳ್ಳಬೇಡಿ. ಬಡವರಿಗೆ ತೊಂದರೆ ನೀಡಿದ ವ್ಯಕ್ತಿ ಎಷ್ಟು ಪೂಜೆ ಮಾಡಿದ್ರೂ ಶನಿಯನ್ನು ಸಂತೋಷಗೊಳಿಸಲು ಸಾಧ್ಯವಿಲ್ಲ.
ಎ.ಸಿ. ಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆವರು ಬರುವುದಿಲ್ಲ. ಶರೀರದ ಹೊಲಸು ಹೊರಗೆ ಹೋಗುವುದಿಲ್ಲ. ಇದ್ರಿಂದ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಜೊತೆಗೆ ಶನಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.